ವಿರಾಜಪೇಟೆ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕುಂದ ಗ್ರಾಮದಲ್ಲಿ ಕಾಡಾನೆ ಹಿಂಡುಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ.
ವಿರಾಜಪೇಟೆ ತಾಲ್ಲೂಕಿನ ಕುಂದಾ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಕುಂದಾ ಗ್ರಾಮದ ದೇವರ ಕಾಡಿನಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಇಂದು(ಮಾರ್ಚ್.28) ಕುಂದ ಗ್ರಾಮದಿಂದ ಈಚೂರು ಗ್ರಾಮದ ಪವನ್ ಅವರ ಗದ್ದೆ ಹಾಗೂ ತೋಟಕ್ಕಾಗಿ ಓಡಿಸಲಾಗಿದೆ.
ಇನ್ನು ಈ ಕಾಡಾನೆಗಳು ಬಿ. ಶೆಟ್ಟಿಗೇರಿ ಕಡೆಗೆ ತೆರಳಿದ್ದು, ಪೊನ್ನಂಪೇಟೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.





