ಕೊಡಗು: ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪಟ್ಟಣದ ಮಾರಿಯಮ್ಮ ದೇವಸ್ಥಾನದಿಂದ ತೆಲುಗರ ಬೀದಿಯಲ್ಲಿ ಒಂಟಿ ಸಲಗವೊಂದು ಓಡಾಟ ನಡೆಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿರಾಜಪೇಟೆಯ ಪಟ್ಟಣದ ಮಾರಿಯಮ್ಮ ದೇವಸ್ಥಾನದಿಂದ ತೆಲುಗರ ಬೀದಿ ಮುಖಾಂತರ ನಿನ್ನೆ(ಮಾರ್ಚ್.18) ಮಧ್ಯರಾತ್ರಿ ಸುಮಾರು 1.30 ಗಂಟೆಗೆ ಕಾಡಾನೆಯೊಂದು ಓಡಾಡಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇನ್ನು ಆ ಕಾಡಾನೆಯೂ ಪಟ್ಟಣದ ಒಳಗೇ ಸಂಚಾರ ಮಾಡಿದ್ದು, ಆ ಭಾಗದ ಜನರಲ್ಲಿ ಆತಂಕ ಮೂಡಿಸಿದೆ. ಸಾರ್ವಜನಿಕರು ಮುಕ್ತವಾಗಿ ಓಡಾಡಲು ಹೆದರುವಂತ ಪರಿಸ್ಥಿತಿ ನಿರ್ಮಾಣವಾಗಿದೆ.