ಮಡಿಕೇರಿ: ವೇತನ ನೀಡುವಂತೆ ಒತ್ತಾಯಿಸಿ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಅತಿಥಿ ಉಪನ್ಯಾಸಕರು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಪ್ರತಿಭಟನೆ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಇವರಿಗೆ ಅಲ್ಲಿನ ಕಾಲೇಜು ವಿದ್ಯಾರ್ಥಿಗಳೇ ಬೆಂಬಲ ಸೂಚಿಸಿದ್ದಾರೆ.
ವಿದ್ಯಾರ್ಥಿಗಳು ತಮ್ಮ ತರಗತಿಗಳನ್ನು ತ್ಯಜಿಸಿ, ತಮ್ಮ ಅತಿಥಿ ಉಪನ್ಯಾಸಕರ ಜೊತೆಯಲ್ಲಿ ಕೈಜೋಡಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಮಂಗಳೂರು ವಿವಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ 43ಜನ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಿಂದ ಅತಿಥಿ ಉಪನ್ಯಾಸಕರಿಗೆ ವೇತನ ಪಾವತಿಸಿಲ್ಲ. ಹಾಗಾಗಿ ಡಿಸೆಂಬರ್ 29ರಿಂದ ಅತಿಥಿ ಅಧ್ಯಾಪಕರು ಪ್ರತಿಭಟನೆ ಪ್ರಾರಂಭಿಸಿದ್ದರು. ಮೂರು ದಿನಗಳ ನಂತರ ಅಕ್ಟೋಬರ್ ಸಂಬಳ ನೀಡಿದ್ದರಿಂದ ತಾತ್ಕಾಲಿಕ ಪ್ರತಿಭಟನಯೆನ್ನು ಕೈಬಿಡಲಾಗಿತು.
ಕೋವಿಡ್ ಅವಧಿಯಲ್ಲಿ ನಮ್ಮ ಮೂರು ತಿಂಗಳ ಸಂಬಳ ಬಾಕಿಯಿದೆ. ಹಾಗಿದ್ದರೂ ಡಿಸೆಂಬರ್‌ನಿಂದ ನಮಗೆ ಇನ್ನೂ ಸಂಬಳ ಬಂದಿಲ್ಲ ಎಂದು ಉಪನ್ಯಾಸಕರು ಪ್ರತಿಭಟನೆ ಮಾಡುತ್ತಿದ್ದಾರೆ. ಫೆಬ್ರವರಿವರೆಗಿನ ವೇತನ ಜಮಾ ಮಾಡುವವರೆಗೆ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದಾರೆ.