ಮಡಿಕೇರಿ: ಕಾರ್ಗಿಲ್ ವಿಜಯ್ ದಿವಸ ಆಚರಣೆ ಹಿನ್ನಲೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೖತ್ತರಾದ ನಾಲ್ವರು ಯೋಧರಿಗೆ ರೋಟರಿ ವುಡ್ಸ್‌ನಿಂದ ಸನ್ಮಾನಿಸಲಾಯಿತು.
ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿನ ಅಮರ್ ಜವಾನ್ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ರೋಟರಿ ವುಡ್ಸ್ ವತಿಯಿಂದ ಪುಪ್ಪಾಚ೯ನೆ ಮಾಡಲಾಯಿತು. ಬಳಿಕ ನಿವೃತ್ತ ಸೇನಾಧಿಕಾರಿಗಳಾದ ಹಾನರರಿ ಕ್ಯಾಪ್ಟನ್ ಜಿ.ಎಸ್ ರಾಜಾರಾಮ್, ಎನ್ ಚಂದ್ರನ್, ಪ್ರಮೋದ್ ಕುಮಾರ್ ಸಿ, ಬಾಬು ಪ್ರಸಾದ್ ರೈ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ರೋಟರಿ ವುಡ್ಸ್ ಅಧ್ಯಕ್ಷ ಹರೀಶ್ ಕಿಗ್ಗಾಲು, ಕಾಯ೯ದಶಿ೯ ಕಿರಣ್ ಕುಂದರ್, ವಲಯ ಸೇನಾನಿ ಅನಿತಾ ಪೂವಯ್ಯ, ಅರಣ್ಯಾಧಿಕಾರಿ ಮಯೂರ್, ರೋಟರಿ ಪ್ರಮುಖರಾದ ಬಿ.ಜಿ ಅನಂತಶಯನ, ಅನಿಲ್ ಹೆಚ್,ಟಿ, ಎಸ್ ಎಸ್ ಸಂಪತ್ ಕುಮಾರ್ ಅವರು ಇದ್ದರು.





