ನಾಪೋಕ್ಲು : ಸಮೀಪದ ಕೊಳಕೇರಿ ಗ್ರಾಮದ ತೋಟವೊಂದರಲ್ಲಿ ಕಂಡು ಬಂದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಮೂರ್ನಾಡುವಿನ ಉರಗತಜ್ಞ ಸ್ನೇಕ್ ಪ್ರಜ್ವಲ್ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಕೇರಿ ಗ್ರಾಮದ ಬೆಳೆಗಾರ ಕನ್ನಂಭೀರ ಪವನ್ ಪೂವಯ್ಯ ಎಂಬವರ ಕಾಫಿ ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುವ ಸಂದರ್ಭದಲ್ಲಿ 14 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಕಂಡಿದ್ದಾರೆ. ಭಯಭೀತರಾದ ಕಾರ್ಮಿಕರು ಕೂಡಲೇ ತೋಟದ ಮಾಲೀಕರ ಗಮನಕ್ಕೆ ತಂದಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗತಜ್ಞ ಸ್ನೇಕ್ ಪ್ರಜ್ವಲ್ ಕಾಳಿಂಗ ಸರ್ಪವನ್ನು ಹರಸಾಹಸದಿಂದ ರಕ್ಷಿಸಿ ಮಾಕುಟ್ಟ ರಕ್ಷಿತಾರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.





