ಮಡಿಕೇರಿ: ಮಳೆಯಿಲ್ಲದೆ ಕಂಗೆಟ್ಟಿದ ರಾಜ್ಯದ ಜನರಿಗೆ ಅಲ್ಲಲ್ಲಿ ಅಲ್ವ ಪ್ರಮಾಣದಲ್ಲಿ ಮಳೆಯಾಗುತ್ತಿರುವುದು ರೈತರಲ್ಲಿ ಸಂತಸ ಮೂಡಿಸುತ್ತಿದೆ. ಆದರೆ ಎಲ್ಲೂ ಕೂಡ ಬಿರುಸಿನ ಅಥವಾ ನೀರು ಜೋರಾಗಿ ಹರಿಯುವಂಥ ಮಳೆಯಾಗುತ್ತಿಲ್ಲ. ಇಂದು(ಏ.22) ವಿರಾಜಪೇಟೆಯಲ್ಲಿ ಭಾರಿ ಮಳೆಯಾಗಿದ್ದು ತಾಲೂಕಿನ ಕಾಫಿ ಬೆಳೆಗಾರರಲ್ಲಿ ಸಂತಸ ಮೂಡಿದೆ.
ವಿರಾಜಪೇಟೆಯ ಬೇತ್ರಿ, ಕದಲೂರು, ಬಿಟ್ಟಂಗಾಲ, ಮೇಕೆರಿ, ಕಗ್ಗೋಡು ಸೇರಿದಂತೆ ಮೊದಲಾದ ಕಡೆಗಳಲ್ಲಿ ಧಾರಕಾರ ಮಳೆಯಾಗಿದೆ. ಕೊಡಗಿಗೆ ಈ ಭಾಗಗಳಲ್ಲಿ ಅತೀ ಹೆಚ್ಚು ಕಾಫಿ ಬೆಳಗಾರರಿದ್ದಾರೆ.