Mysore
19
few clouds
Light
Dark

ಕೊಡಗಿನಲ್ಲಿ ಜನವರಿ.1ರಿಂದ ಸೆಪ್ಟೆಂಬರ್.‌1ರವರೆಗೆ ಸರಾಸರಿ 102.28 ಇಂಚು ದಾಖಲೆಯ ಮಳೆ

ಕೊಡಗು: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮಳೆಯ ಪ್ರಮಾಣ ಸರಾಸರಿ ನೂರು ಇಂಚಿನ ಗಡಿ ದಾಟಿದೆ.

ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಜನವರಿ 1ರಿಂದ ಸೆಪ್ಟೆಂಬರ್.‌1ರ ತನಕ ಜಿಲ್ಲೆಯಲ್ಲಿ ಸರಾಸರಿ 102.28 ಇಂಚು ಮಳೆ ದಾಖಲಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಳೆಯ ಪ್ರಮಾಣ 51.97 ಇಂಚು ಹೆಚ್ಚಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಸರಾಸರಿ ಮಳೆ 50.31 ಇಂಚುಗಳಷ್ಟಾಗಿತ್ತು.

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನಲ್ಲಿ ಇತರ ತಾಲ್ಲೂಕುಗಳಿಗಿಂತ ಹೆಚ್ಚು ಮಳೆಯಾಗಿದೆ ಎಂದು ಅಂದಾಜಿಸಲಾಗಿದ್ದು, ಈ ಬಾರಿ ಮಳೆಯ ಪ್ರಮಾಣ 60.27 ಇಂಚು ಹೆಚ್ಚಾಗಿದೆ.

ಇನ್ನುಳಿದಂತೆ ವಿರಾಜಪೇಟೆ, ಪೊನ್ನಂಪೇಟೆ, ಸೋಮವಾರಪೇಟೆ, ಕುಶಾಲನಗರ ಸೇರಿದಂತೆ ಅನೇಕ ಹೋಬಳಿಗಳು ಹಾಗೂ ಆಯಾಯ ಗ್ರಾಮಗಳಲ್ಲಿ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ.

ಇನ್ನು ಅಧಿಕ ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಹಲವು ಅನಾಹುತಗಳು ಸಂಭವಿಸಿದ್ದು, ಕಾಫಿ ಬೆಳೆಯ ಮೇಲೂ ಮಳೆ ಈ ಬಾರಿ ವ್ಯತಿರಿಕ್ತ ಪರಿಣಾಮ ಬೀರಿದೆ.

ಇನ್ನು ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಮಳೆ ಎಡಬಿಡದೇ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.