ಮಡಿಕೇರಿ: ಅನಧಿಕೃತವಾಗಿ ವಾಹನದ ಸ್ವರೂಪ ಬದಲಾಯಿಸಿಕೊಂಡು ಕರ್ಕಶ ಶಬ್ಧದ ಸೈಲೆನ್ಸರ್ ಅಳವಡಿಸಿಕೊಂಡು ಸಾರ್ವಜನಿಕರಿಗೆ ಭಾರೀ ಕಿರಿಕಿರಿ ಮಾಡುತ್ತಿದ್ದ ಜಿಪ್ಸಿ ವಾಹನವೊಂದನ್ನು ಮಡಿಕೇರಿ ಸಂಚಾರಿ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಡಿಕೇರಿ ನಗರದಲ್ಲಿ ಈ ಗಾಡಿಯು ರೇಸಿಂಗ್ ಸ್ಫೀಡ್‌ನಲ್ಲಿ ಸಂಚರಿಸುತ್ತರುವುದಾಗಿ ಸಾರ್ವಜನಿಕರಿಂದ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಮುಂದಾಗ ಸಂಚಾರಿ ಪೊಲೀಸರಿಗೆ ಇದರ ಅಸಲಿಯತ್ತು ಗೊತ್ತಾಯಿತು.
ಜಿಪ್ಸಿ ವಾಹನ ಮಡಿಕೇರಿ ನಗರದ ಕಡೆಗೆ ಬರುತ್ತಿದ್ದಂತೆ ವಾಹನವನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.




