Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ತಡರಾತ್ರಿ ಲಾರಿ ತಡೆದು ತರಕಾರಿ ತಿಂದು ತೇಗಿದ ಗಜರಾಜ

ಕೊಡಗು : ಮೈಸೂರಿನಿಂದ ತರಕಾರಿ ತುಂಬಿಕೊಂಡು ಆನೆ ಚೌಕೂರು ಗೋಣಿಕೊಪ್ಪಲು ಮಾರ್ಗವಾಗಿ ಕೇರಳಕ್ಕೆ ತೆರಳುತ್ತಿದ್ದ ಲಾರಿಯನ್ನ ಒಂಟಿಸಲ ತಡರಾತ್ರಿ ಅಡ್ಡ ಹಾಕಿದೆ. ಬಳಿಕ ವಾಹನ ಹಿಂಭಾಗಕ್ಕೆ ತೆರಳಿ ಟಾರ್ಪಲ್‌ ಎಳೆದು ಹಾಕಿ ವಿವಿಧ ತರಕಾರಿಗಳನ್ನ ಎಳೆದು ರಸ್ತೆಗೆ ಹಾಕಿದೆ. ತಡರಾತ್ರಿ ೧೦.೪೫ ರ ಸುಮಾರಿಗೆ ಈ ಘಟನೆ ನಡೆದಿದ್ದು, ಸುಮಾರು ಅರ್ಧಗಂಟೆಗಳ ಕಾಲ ತಿಂದು ತೇಗಿ ತೆರಳಿದೆ. ಬಳಿಕ ಲಾರಿ ಚಾಲಕ ಉಳಿದಂತಹ ತರಕಾರಿಗಳನ್ನೆ ತೆಗೆದುಕೊಂಡು ಕೇರಳಕ್ಕೆ ತೆರಳಿದ್ದಾನೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಾರ್ವಜನಿಕರು ಕೂಡ ತರಕಾರಿ ಲಾರಿ ಚಾಲಕನಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

Tags: