ಸುಂಟಿಕೊಪ್ಪ: ಕಾಫಿ ತೋಟದಲ್ಲಿ ವಿದ್ಯುತ್ ತಂತಿ ಸ್ಪರ್ಶಗೊಂಡು ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಸುಂಟಿಕೊಪ್ಪ ಬಳಿಯ ಕೊಡಗರಹಳ್ಳಿಯಲ್ಲಿ ನಡೆದಿದೆ.
ಕೊಡಗರಹಳ್ಳಿಯ ಐಟಿಸಿ ಎಸ್ಟೇಟ್‌ನಲ್ಲಿ ಮಂಗಳವಾರ ( ಮೇ 28 ) ರಾತ್ರಿ ವಿದ್ಯುತ್ ತಂತಿ ತಗುಲಿದ ಪರಿಣಾಮ ಸಲಗವೊಂದು ಉಸಿರು ನಿಲ್ಲಿಸಿದೆ. ಸ್ಥಳಕ್ಕೆ ಕುಶಾಲನಗರ ಆರ್‌ಎಫ್‌ಓ ರತನ್ ಕುಮಾರ್, ಉಪವಲಯ ಅರಣ್ಯಾಧಿಕಾರಿ ದೇವಯ್ಯ ಹಾಗೂ ಸೆಸ್ಕ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಆನೆಯ ವಯಸ್ಸು 20 ವರ್ಷವೆಂದು ಅಂದಾಜಿಸಲಾಗಿದೆ.





