Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕುಶಾಲನಗರ ಭಾಗದಲ್ಲಿ ಭೂಮಿ ಕಂಪಿಸಿದ ಅನುಭವ!

ಮಡಿಕೇರಿ: ಕುಶಾಲನಗರ, ಬೈಲುಕುಪ್ಪೆ ಸೇರಿದಂತೆ ವಿವಿಧ ಬಡಾವಣೆ ಹಾಗೂ ಇತರೆ ಭಾಗಗಳಲ್ಲಿ ಭೂಮಿ ಕಂಪಿಸಿರುವ ಅನುಭವವಾಗಿದೆ ಎನ್ನಲಾಗಿದೆ.

ಶುಕ್ರವಾರ ಬೆಳಿಗ್ಗೆ 6.25 ವೇಳೆಗೆ 2 ರಿಂದ 3 ಸೆಕೆಂಡ್‌ ಒಳಗಾಗಿ ಭೂಮಿ ಕಂಪಿಸಿರುವ ಅನುಭವವಾಗಿದೆ.

ಭಾರೀ ಶಬ್ಧ ಕೇಳಿದ ಜನರು ಗುಡುಗಿನ ಶಬ್ಧ ಎಂದು ಕೆಲವರು ಭಾವಿಸಿದ್ದರೇ, ಮತ್ತೆ ಕೆಲವರು ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಹಲವರು ಚರ್ಚಿಸುತ್ತಿದ್ದಾರೆ.

ಹಾರಂಗಿ ಜಲಾಶಯದ ಜನರು ಈ ಭೂ ಕಂಪನ ಬಗ್ಗೆ ಜನರು ಭಯಭೀತರಾಗಿದ್ದಾರೆ. ಆದರೆ ಈ ಬಗ್ಗೆ ಭೂ ವಿಜ್ಞಾನಿಗಳು ಇನ್ನಷ್ಟೆ ಸ್ಪಷ್ಟನೆ ನೀಡಬೇಕಿದೆ.

Tags: