Mysore
28
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಕೊಡಗು ಜಿಲ್ಲೆಯಲ್ಲಿ ಕಳೆಗಟ್ಟಿದ ಚಿಕ್ಲಿಹೊಳೆ, ಜಲವೈಭವ ಹೇಗಿದೆ ಗೊತ್ತಾ.?

ಕೊಡಗು: ಕರ್ನಾಟಕದಲ್ಲಿ ಮುಂಗಾರು ಮಳೆಯಿಂದಾಗಿ ಚಿಕ್ಕಪುಟ್ಟ ಜಲಾಶಯಗಳಿಗೂ ಜೀವ ಕಳೆ ಬಂದಿದೆ. ಕೊಡಗಿನ ಚಿಕ್ಲಿಹೊಳೆ ಕೂಡ ಅದರಲ್ಲಿ ಒಂದಾಗಿದೆ.

ಕಾವೇರಿ ಕಣಿವೆಯ ಚಿಕ್ಕ ಜಲಾಶಯಗಳಲ್ಲಿ ಒಂದಾಗಿರುವ ಕೊಡಗಿನ ಕುಶಾಲನಗರ ತಾಲ್ಲೂಕಿನ ಚಿಕ್ಲಿಹೊಳೆ ಅಣೆಕಟ್ಟೆ ಭರ್ತಿಯಾಗಿದೆ. ಸೋಮವಾರಪೇಟೆ, ಕುಶಾಲನಗರ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯ ಹಸಿರು ಹಾಗೂ ನೀರಿನಿಂದ ಕಂಗೊಳಿಸುತ್ತಿದೆ.

ಈ ಬಾರಿಯ ಬೇಸಿಗೆ ಅವಧಿಯಲ್ಲಿ ಖಾಲಿ ಜಲಾಶಯ ಕಂಡು ಬೇಸರದಿಂದಲೇ ಹಿಂದಿರುಗುತ್ತಿದ್ದ ಪ್ರವಾಸಿಗರಿಗೆ ಈಗ ಮಳೆರಾಯನ ಕೃಪೆಯಿಂದ ಆಹ್ಲಾದಕರ ವಾತಾವರಣ ಉಂಟಾಗಿದೆ.

ವಿಶೇಷ ವಿನ್ಯಾಸದಲ್ಲಿ ನಿರ್ಮಿಸಿರುವ ಈ ಅಣೆಕಟ್ಟೆ ತುಂಬಿದಾಗ ಅರ್ಧಚಂದ್ರಾಕೃತಿ ಕಟ್ಟೆಯ ಮುಖಾಂತರ ನೀರು ಹೊರಬೀಳುವ ದೃಶ್ಯ ಆಕರ್ಷಕವಾಗಿರುತ್ತದೆ. ಈಗಲೂ ಅಂತಹ ಸನ್ನಿವೇಶ ನಿರ್ಮಾಣವಾಗಿದೆ.

ಕುಶಾಲನಗರ ತಾಲ್ಲೂಕಿನ ರಂಗಸಮುದ್ರದಲ್ಲಿ ಇರುವ ಚಿಕ್ಲಿಹೊಳೆ ಜಲಾಶಯ ನಿರ್ಮಾಣ ಶುರುವಾಗಿದ್ದು ಎಪ್ಪತ್ತರ ದಶಕದ ಅಂತ್ಯದಲ್ಲಿ. ಮುಗಿದಿದ್ದು ಎಂಬತ್ತರ ದಶಕದ ಆರಂಭದಲ್ಲಿ. ನಾಲ್ಕು ದಶಕದಿಂದ ಈ ಜಲಾಶಯ ಬಳಕೆಯಲ್ಲಿದೆ.

ಅರ್ಧ ಟಿಎಂಸಿ ನೀರು ಸಂಗ್ರಹಿಸಬಹುದಾದ ಚಿಕ್ಲಿಹೊಳೆ ತುಂಬಿದಾಗ ಹೊರಹರಿಯುವ ನೀರು ಕಾವೇರಿ ನದಿಯನ್ನು ಸೇರುತ್ತದೆ. ಇದನ್ನು ನೋಡುವುದೇ ಆನಂದದಾಯಕ.

ಈ ಬಾರಿ ಜುಲೈ ಮೊದಲ ವಾರದಲ್ಲಿ ತುಂಬಿದ ಚಿಕ್ಲಿಹೊಳೆಗೆ ಮಡಿಕೇರಿ ಶಾಸಕ ಮಂಥರ್‌ ಗೌಡ ಅವರು ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

Tags: