ಮಡಿಕೇರಿ: ಸ್ವತಂತ್ರ ಹೋರಾಟಗಳು ದಿನ ಒಂದಕ್ಕೆ ಸಿಮೀತವಾಗದೆ ನೂರಾರು ವರ್ಷಗಳ ಸುದೀರ್ಘ ಹೋರಾಟವಾಗಿದ್ದವು. ಅಂತಹ ಅದೆಷ್ಟೊ ತ್ಯಾಗ ಬಲಿದಾನದ ಮೂಲಕ ಭಾರತೀಯರು ಸ್ವತಂತ್ರ ಪಡೆದಿದ್ದಾರೆ ಎಂದು ರೋಟರಿ ಸಂಸ್ಥೆಯ ವಲಯ ಅಧಿಕಾರಿ ಡಾ. ಲವೀನ್ ಚೆಂಗಪ್ಪ ಹೇಳಿದರು.
ಸಾಧೀಕ್ ಆರ್ಟ್ ಲಿಂಕ್ಸ್ ವಿರಾಜಪೇಟೆ ಮತ್ತು ರೋಟರಿ ಕ್ಲಬ್ ವಿರಾಜಪೇಟೆ ಶಾಖೆಯ ವತಿಯಿಂದ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿ ಕಲಾ ಉತ್ಸವ ೨೦೨೪ ಅಂಗವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಒಂದು ದಿನ ದೇಶ ಭಕ್ತಿ ಬಿಂಬಿಸುವ ಚಿತ್ರ ಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸತತ ಹೋರಾಟದ ಫಲವಾಗಿ ನಮಗೆ ಸ್ವತಂತ್ರ ಲಭಿಸಿದೆ. ಕಿರು ಪ್ರಾಯದ ಮಕ್ಕಳು ಸ್ವತಂತ್ರ ಭಾರತದ ಹೋರಾಟ, ಮಹನೀಯರ ತ್ಯಾಗ ಬಲಿದಾನಗಳ ಕರಾಳ ಚರಿತ್ರೆಯ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.
ಮಕ್ಕಳು ಈಗಿನಿಂದಲೇ ದೇಶ ಭಕ್ತಿ ಮೈಗೂಡಿಸಿಕೊಂಡು ಜಾಗೃತ ಭಾರತ ನಿರ್ಮಾಣ ಕ್ಕೆ ಮಕ್ಕಳು ಮುಂದಾಗಬೇಕು. ಸದೃಡ ಭಾರತದ ಕನಸು ನನಸಾಗಬೇಕು ಎಂದರು.
ರೋಟರಿ ಕ್ಲಬ್ ವಿರಾಜಪೇಟೆ ಅದ್ಯಕ್ಷರಾದ ಪ್ರಣವ್ ಚಿತ್ರಭಾನು ಮಾತನಾಡಿ, ನಾಡು ನನ್ನದು ದೇಶ ನನ್ನದು ಎಂಬ ಭಾವರ್ಥ ನಮ್ಮ ಧ್ಯೇಯ ವಾಕ್ಯವಾಗಬೇಕು. ಬಾಲ್ಯದಿಂದಲೇ ಸ್ವತಂತ್ರ ಭಾರತ ವೀರ ಚರಿತ್ರೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚಿತ್ರಕಲಾವಿದರಾದ ಸಾಧೀಕ್ ಅವರೊಂದಿಗೆ ಬೆರೆತು ಕಾರ್ಯಕ್ರಮ ಅಯೋಜಿಸಲಾಗಿದೆ. ದೇಶ ಭಕ್ತಿ ಪರಿಕಲ್ಪನೆ ಎಲ್ಲಾ ವಿದ್ಯಾರ್ಥಿಯಲ್ಲಿ ಜಾಗೃತವಾಗಲಿ ಎಂದು ಹೇಳಿದರು.
ಚಿತ್ರಕಲಾ ಶಿಬಿರದಲ್ಲಿ ನಾಪೊಕ್ಲು, ಮೂರ್ನಾಡು,ಸಿದ್ದಾಪುರ,ಅಮ್ಮತ್ತಿ,ಪಾಲಿಬೆಟ್ಟ, ಗೋಣಿಕೊಪ್ಪಲು ಮತ್ತು ವಿರಾಜಪೇಟೆ ನಗರದ ವಿವಿಧ ಶಾಲೆಗಳ ಸುಮಾರು 95 ವಿದ್ಯಾರ್ಥಿಗಳು ಚಿತ್ರಕಲಾ ಶಿಭಿರದಲ್ಲಿ ಭಾಗವಹಿಸಿದ್ದರು. ೦೧ ರಿಂದ ೦೨ನೇ ತರಗತಿ, ೦೩ ರಿಂದ ೦೪ ನೇ ತರಗತಿ,೦೫ ರಿಂದ ೦೭ ನೇ ತರಗತಿ,ಮತ್ತು ೦೮ ರಿಂದ ೧೦ ನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಎರ್ಪಡಿಸಲಾಗಿತ್ತು.
ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ ದ್ವೀತಿಯ, ಮತ್ತು ತೃತೀಯ ಎಂದು ಪಾರಿತೋಷಕಗಳನ್ನು ನೀಡಲಾಯಿತು.
ರೋಟರಿ ಕ್ಲಬ್ ವಿರಾಜಪೇಟೆಯ ಹಿರಿಯ ಸದಸ್ಯರಾದ ಸುದರ್ಶನ್ ರೈ ,ಸಂಸ್ಥೆಯ ಉಪ ಅದ್ಯಕ್ಷರಾದ ಕೆ.ಹೆಚ್ ಆದಿತ್ಯ, ಕಾರ್ಯಕ್ರಮ ಅಯೋಜಕರಾದ ಸಾಧೀಕ್ ಹಂಸ ಮತ್ತು ತಾಂತ್ರಿಕ ಸದಸ್ಯರು, ರೋಟರಿ ಕ್ಲಬ್ ನ ಸದಸ್ಯರು ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.





