ಮಡಿಕೇರಿ: ಗೋಣಿಕೊಪ್ಪಲು ಮುಖ್ಯ ರಸ್ತೆಯಲ್ಲಿರುವ ಅಂಬೂರ್ ಬಿರಿಯಾನಿ ಮಳಿಗೆ ಇದ್ದ ಕಟ್ಟಡ ದಿಢೀರನೇ ಕುಸಿದು ಬಿದ್ದಿದ್ದು, ಮೂವರನ್ನು ರಕ್ಷಿಸಲಾಗಿದೆ. ಇನ್ನೂ ಮೂವರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ತೀರಾ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದ ಒಂದು ಭಾಗದಲ್ಲಿ ಅಂಬುರ್ ಬಿರಿಯಾನಿ ಹೋಟೆಲ್, ಮತ್ತೊಂದು ಭಾಗದಲ್ಲಿ ಮಟನ್ ಸ್ಟಾಲ್ ಅಂಗಡಿ ಇತ್ತು. ಗುರುವಾರ ಮಧ್ಯಾಹ್ನದ ವೇಳೆಗೆ ಕಟ್ಟಡ ಸಂಪೂರ್ಣವಾಗಿ ನೆಲಸಮಗೊಂಡಿದೆ. ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಆಗಮಿಸಿ, ಜೆಸಿಬಿ ಹಾಗೂ ಸಾರ್ವಜನಿಕರ ಸಹಕಾರದಲ್ಲಿ ರಕ್ಷಣಾ ಕಾರ್ಯಚರಣೆ ನಡೆಸಲಾಗುತ್ತಿದೆ.





