Mysore
20
broken clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಬರಹ ಖಂಡಿಸಿ ಎಸ್ಪಿಗೆ ದೂರು ನೀಡಿದ ಬಿಜೆಪಿ

ಕೊಡಗು: ಬಿಜೆಪಿ ಪ್ರತಿಭಟನೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಗಿ ಬರೆದು ಹಂಚಿದ ವ್ಯಕ್ತಿ ವಿರುದ್ಧ ಬಿಜೆಪಿ ಘಟಕ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿದೆ.

ಕಳೆದ ನಾಲ್ಕೈದು ದಿನಗಳಿಂದ ಬಿಜೆಪಿಯು ರಾಜ್ಯದಲ್ಲಿ ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿ ಜಿಲ್ಲೆಯಲ್ಲೂ ಪ್ರತಿಭಟನೆ ನಡೆಸುತ್ತಿದೆ. ಅದರಂತೆ ಕೊಡಗು ಜಿಲ್ಲೆಯಲ್ಲಿಯೂ ಪ್ರತಿಭಟನೆ ನಡೆಸಿ, ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಆ ಫೋಟೋವನ್ನು ಬಳಸಿಕೊಂಡು,  ಕೋತಿಗಳು ಸಾರ್‌ ಕೋತಿಗಳು. ಕಳ್ಳು ಕುಡಿದ ಕೋತಿಗಳ, ಬಿಜೆಪಿಗರು ನಡೆಸಿದ್ದು ಪ್ರತಿಭಟನೆಯಲ್ಲಾ, ಕಳ್ಳು ಕುಡಿದ ಕೋತಿಗಳ ರೀತಿ ನಡೆಸಿದ ದುಂಡಾವರ್ತನೆ ಎಂದು ವ್ಯಂಗ್ಯವಾಗಿ ಬರೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎಂಬುದನ್ನು ಖಂಡಿಸಿ ಬಿಜೆಪಿ ಘಟಕ ದೂರು ಕೊಡಗು ಎಸ್ಪಿಗೆ ನೀಡಿದೆ.

Tags: