Mysore
26
scattered clouds

Social Media

ಶುಕ್ರವಾರ, 02 ಜನವರಿ 2026
Light
Dark

ಕೊಡಗು: ಬಿಜೆಪಿ ಲೋಕಸಭಾ ಅಭ್ಯರ್ಥಿ ಯದುವೀರ್ ಮತಯಾಚನೆ

ಸಿದ್ದಾಪುರ: ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಹಿರಂಗ ಪ್ರಚಾರ ನಡೆಸುವ ಮೂಲಕ ಮತಯಾಚನೆ ಮಾಡಿದರು.

ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ವಿಶ್ರಾಂತಿ ಇಲ್ಲದೆ ಭ್ರಷ್ಟಾಚಾರ ರಹಿತ ಆಡಳಿತ ನೀಡಿ ಪ್ರಪಂಚದಲ್ಲೆ ಭಾರತದ ಘನತೆಯನ್ನು ಎತ್ತಿ ಹಿಡಿದ ವಿಶ್ವ ನಾಯಕ ನರೇಂದ್ರ ಮೋದಿಯನ್ನು ಮತ್ತೊಮ್ಮ ಪ್ರಧಾನಿ ಯನ್ನಾಗಿಸಲು ತಮ್ಮಗೆ ಮತ ನೀಡಿ ವಿಜಯಶಾಲಿಯನ್ನಾಗಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.

2014ರಲ್ಲಿ ಆರ್ಥಿಕ ಪ್ರಗತಿಯಲ್ಲಿ 17ನೇಸ್ಥಾನದಲ್ಲಿಇದ್ದ ಭಾರತವನ್ನು 10ವರ್ಷದಲ್ಲಿ 5ನೇ ಸ್ಥಾನಕ್ಕೆ ಏರಿಸಿದ್ದು 70ಏರ್ಪೋರ್ಟ್ ಇದ್ದ ದೇಶದಲ್ಲಿ 150ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವ ಮೂಲಕ ಪ್ರಗತಿಪತದಲ್ಲಿ ಮುನ್ನಡೆಸುತ್ತಿದ್ದಾರೆ ಎಂದರು.

ನಾವು ಉದ್ಯೋಗ ಆಕಾಂಕ್ಷಿಗಳು ಅಲ್ಲ ಉದ್ಯೋಗ ಸೃಷ್ಟಿಕರ್ತರಾಗಿಸುವಲ್ಲಿ ಶ್ರಮಿಸುತ್ತಿರುವ ಮೋದಿಯವರು ಸಾಂಸ್ಕೃತಿ, ಪರಂಪರೆಗಳನ್ನು ರಕ್ಷಿಸಿ ಪೋಷಿಸುವ ಕೆಲಸ ಮಾಡುವ ಮೂಲಕ ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ವನ್ನು ಆಚರಿಸಿದರು ಎಂದು ತಿಳಿಸಿದರು.

ಸಂದರ್ಭದಲ್ಲಿ ವಿಧಾನಪರಿಷತ್‌ ಸದಸ್ಯರಾದ ಸುಜಾ ಕುಶಾಲಪ್ಪ, ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ ಬೋಪಯ್ಯ ಜಿಲ್ಲಾಧ್ಯಕ್ಷರಾದ ನಾಪಂಡ ರವಿ ಕಾಳಪ್ಪ, ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ನೆಲ್ಲಿರ ಚಲನ್ ಕುಮಾರ್, ವಿ.ಕೆ.ಲೋಕೇಶ್, ತಾಲ್ಲೂಕು ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಅಜಿತ್ ಕರುಂಬಯ್ಯ ಕುಟ್ಟಂಡ, ಮಂಜು ಗಣಪತಿ ಮುದ್ದಿಯಡ, ಹಾಗೂ ಎಲ್ಲಾ ಶಕ್ತಿ ಕೇಂದ್ರ ಪ್ರಮುಖರು, ಸಹ ಪ್ರಮುಖರು, ಭೂತ್‌ ಅಧ್ಯಕ್ಷರುಗಳು, ವಿವಿಧ ಮೋರ್ಚಾ ಪದಾಧಿಕಾರಿಗಳು, ಪಂಚಾಯತ್‌ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು,ಮುಖಂಡರುಗಳು, ಹಿರಿಯರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Tags:
error: Content is protected !!