ಕೊಡಗು : ಖಾಸಗಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೆ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಸುಂಟಿಕೊಪ್ಪದ ಗದ್ದೆಹಳ್ಳ ಬಳಿ ನಡೆದಿದೆ.
ಸುಂಟಿಕೊಪ್ಪದ ನಿವಾಸಿ ಪಟ್ಟೆಮನೆ ಲೋಕೇಶ್ ಕುಮಾರ್ ಮೃತ ದುರ್ದೈವಿ. ಕಳೆದ ಹಲವು ವರ್ಷಗಳಿಂದ ಲೋಕೇಶ್ ವಾಹನ ಚಾಲಕರಾಗಿದ್ದರು. ಸುಂಟಿಕೊಪ್ಪದ ಗದ್ದೆಹಳ್ಳ ಬಳಿ ಸ್ಕೂಟರ್ ಬಲ್ಲಿ ತೆರಳುತ್ತಿದ್ದಾಗ ಅವಘಡ ಸಂಭವಿಸಿ ಸ್ಥಳದಲ್ಲೆ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.





