ಮಡಿಕೇರಿ: ಜಿಲ್ಲೆಯ ನಾಪೋಕ್ಲು ರೆಸಾರ್ಟ್ ನಲ್ಲಿ ಪ್ರವಾಸಿಗನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಇ-ಮೇಲ್ ಮೂಲಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿದೆ.
ಬೆಂಗಳೂರು ಮೂಲದ ವಿನಯ್ ಜೈನ್ ಎಂಬುವವರೆ ಹಲ್ಲೆಗೆ ಒಳಗಾಗಿ, ದೂರು ನೀಡಿರುವುದು. ನಾಪೋಕ್ಲುವಿನ ಸ್ಕೈ ಲಾರ್ಕ್ ರೆಸಾರ್ಟ್ ಮಾಲೀಕ ಮನು ಮುತ್ತಪ್ಪ ಹಲ್ಲೆ ನಡೆಸಿದವರು. ಘಟನೆ ನಡೆದು 25 ದಿನಗಳ ನಂತರ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ದೂರು ನೀಡಿದ್ದಾರೆ.
ಘಟನೆ ಹಿನ್ನಲೆ:
ನಾಪೋಕ್ಲುವಿನ ಸ್ಕೈ ಲಾರ್ಕ್ ರೆಸಾರ್ಟ್ ನಲ್ಲಿ ಕುಟುಂಬ ಸದಸ್ಯರೆಲ್ಲರು ತಂಗಿದ್ದಾಗ ನವಂಬರ್ 2 ರಂದು ನಮ್ಮ ಮೇಲೆ ರೆಸಾರ್ಟಿನ ಮಾಲೀಕರು ಹಾಗೂ ಸಿಬ್ಬಂದಿಗಳು ಹಲ್ಲೆ ನಡೆಸಿದ್ದಾರೆ. ಮೂವರು ದಂಪತಿಗಳು ಮತ್ತು ಐವರು ಮಕ್ಕಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವಿನಯ್ ಜೈನ್ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ಸಂಬಂಧ ವೀಡಿಯೋ ಚಿತ್ರಣ ಸಹಿತ ದೂರುನ್ನು ಇ.ಮೇಲ್ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಪ್ರಕರಣವನ್ನು ಕೈಗೆತ್ತಿಕೊಂಡು ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.