ಕೊಡಗು: ನಾಳೆಗೆ ತಯಾರಾಗಬೇಕಿದ್ದ ಬೇಕರಿ ಉತ್ಪನ್ನಗಳು ಅಕ್ಟೋಬರ್.25ರಂದೇ ಮಾಕುಟ್ಟ ಗಡಿ ಚೆಕ್ ಪೋಸ್ಟ್ ಮೂಲಕ ಕೊಡಗು ಜಿಲ್ಲೆಗೆ ಸದ್ದಿಲ್ಲದೇ ಎಂಟ್ರಿ ಕೊಡುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಕೊಡಗು ಜಿಲ್ಲೆಗೆ ಕೇರಳ ರಾಜ್ಯದ ಕಣ್ಣೂರು ಜಿಲ್ಲೆ ಹಾಗು ವಯನಾಡು ಜಿಲ್ಲೆಗಳಿಂದ ಹೆಚ್ಚು ಆಹಾರ ಉತ್ಪನ್ನಗಳು ಜಿಲ್ಲೆಗೆ ಸರಬರಾಜು ಆಗುತ್ತಿದೆ. ಕಣ್ಣೂರು ಒಂದು ಜಿಲ್ಲೆಯಿಂದ ಅನೇಕ ಆಹಾರ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಅವುಗಳಲ್ಲಿ ಬಹುತೇಕ ಉತ್ಪನ್ನಗಳು ಕಳಪೆ ಗುಣಮಟ್ಟ ಮತ್ತು ಬಳಸಲು ಯೋಗ್ಯವಲ್ಲ ಎಂಬ ವರದಿ ಈಗಾಗಲೇ ಇಲಾಖೆ ತರಿಸಿಕೊಂಡಿದೆ.
ಕಣ್ಣೂರು ಜಿಲ್ಲೆಯ ಇರಿಟ್ಟಿ ತಲಚೇರಿ, ಪಯ್ಯನ್ನೂರು, ತಳಿಪರಂಬ ತಾಲೂಕುಗಳಿಂದ ನಕಲಿ ಸಂಸ್ಥೆಗಳ ಹೆಸರಿನಲ್ಲಿ ಆಹಾರ ಉತ್ಪನ್ನಗಳು ಕೊಡಗು ಹಾಗು ಹಾಸನ ಜಿಲ್ಲೆಗೆ ಎಗ್ಗಿಲ್ಲದೆ ಸರಬರಾಜು ಆಗುತ್ತಿದೆ.
ಇನ್ನು ಆಹಾರ ಸುರಕ್ಷತೆ ಹಾಗು ಗುಣಮಟ್ಟ ಪ್ರಾಧಿಕಾರದ ಪ್ರಯೋಗಾಲಯದಲ್ಲಿ ಇನ್ನು 6 ವರದಿಗಳು ಬರಲು ಬಾಕಿ ಇದ್ದು ಅವುಗಳ ವರದಿ ಬಂದ ಬಳಿಕ ಇಲಾಖೆಯ ಆಯುಕ್ತರ ಗಮನಕ್ಕೆ ತಂದು ಕೇರಳ ಉತ್ಪನ್ನಗಳನ್ನು ಕರ್ನಾಟಕದಲ್ಲಿ ನಿಷೇದ ಮಾಡುವ ಸಾಧ್ಯತೆ ಇದೆ.
ದಿನನಿತ್ಯ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುವ ನಕಲಿ ಸಂಸ್ಥೆಗಳ ಜೊತೆಗೆ ನೋಂದಾಯಿತ ಸಂಸ್ಥೆಗಳಿಗೂ ತಲೆನೋವು ಶುರುವಾಗಲಿದೆ.