ಕೊಡಗು: ರಾಜ್ಯದಲ್ಲಿ ಈ ಬಾರಿ ಬರಗಾಲ ಒಕ್ಕರಿಸಿದ್ದು, ಬಿರುಬಿಸಲ ಬೇಗೆಯಿಂದ ತತ್ತರಿಸಿದ್ದ ಜನರಿಗೆ ಮಳೆ ತಂಪೆರೆದಿದೆ.
ಮಡಿಕೇರಿ ನಗರ ಸುತ್ತಮುತ್ತಾ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಕುಶಾಲನಗರದಿಂದ ಮಡಿಕೇರಿವರೆಗೂ ಮಳೆ ಬಿದ್ದಿದೆ. ಕಾವೇರಿ ಒಡಲು ಬತ್ತಿದ್ದು, ಸದ್ಯ ಈ ಮಳೆಯಿಂದಾಗಿ ಕೊಡಗು ಭಾಗದ ಜನರು ನಿಟ್ಟುಸಿರು ಬಿಡುವಂತಾಗಿದೆ.
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಕಂಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರ್ನಾಲ್ಕು ದಿನಗಳು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿತ್ತು. ಅದರಂತೆ ಇಂದು ಮದ್ಯಾಹ್ನ ಮಡಿಕೇರಿಯಲ್ಲಿ ಮಳೆ ಬಿದ್ದಿದೆ.