Mysore
19
clear sky

Social Media

ಗುರುವಾರ, 29 ಜನವರಿ 2026
Light
Dark

ಕ್ಷುಲ್ಲಕ ಕಾರಣಕ್ಕೆ ಉದ್ಯಮಿ ಮೇಲೆ ಗುಂಡಿನ ದಾಳಿ

ಕೊಡಗು : ಹಾಸನದ ಹೊಯ್ಸಳ ನಗರ ಬಡಾವಣೆಯಲ್ಲಿ ವ್ಯಕ್ತಿಯೊಬ್ಬ ಗುಂಡಿಕ್ಕಿ ಮತ್ತೊಬ್ಬರನ್ನ ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದ. ಈ ಘಟನೆ ಮಾಸುವ ಮುನ್ನವೇ ಕ್ಷುಲ್ಲಕ ಕಾರಣಕ್ಕೆ ಉದ್ಯಮಿಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಕೊಡಗಿನ ಕುಶಾಲನಗರ ಪಟ್ಟಣದಲ್ಲಿ ನಡೆದಿದೆ.

ಉದ್ಯಮಿ ಶಶಿಧರ್‌ ಎಂಬುವವರ ಮೇಲೆ ಅನುದೀಪ್‌ ಎಂಬಾತನಿಂದ 8 ಸುತ್ತಿನ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಶಶಿಧರ್‌ ಕಾಲಿಗೆ ಗಂಭೀರವಾದ ಗಾಯಗಳಾಗಿದೆ. ಉದ್ಯಮಿ ಶಶಿಧರ್‌ ತಮ್ಮ ಕಾರಿನಲ್ಲಿದ್ದಾಗ ಅನುದೀಪ್‌ ಪಿಸ್ತೂಲ್‌ ನಿಂದ ಶಶಿಧರ್‌ ಮೇಲೆ ಗುಂಡು ಹಾರಿಸಿದ್ದಾನೆ. ಎಂಟು ಗುಂಡುಗಳು ಕಾರನ್ನು ಸಹ ಹೊಕ್ಕಿದ್ದು , ಶಶಿಧರ್‌ ಕಾಲಿಗೂ ಗುಂಡು ತಾಗಿದೆ.

ಈ ಘಟನೆ ಸಂಬಂಧ ಕುಶಾಲನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಉದ್ಯಮಿ ಶಶಿಧರ್‌

Tags:
error: Content is protected !!