Mysore
18
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ನಾಪೋಕ್ಲು | ಸ್ನಾನಕ್ಕೆ ತೆರಳಿದ ಯುವಕರಿಬ್ಬರು ನೀರುಪಾಲು

ಮಡಿಕೇರಿ : ಕಾವೇರಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ 8 ಜನ ಯುವಕರ ಪೈಕಿ ಇಬ್ಬರು ನೀರು ಪಾಲಾಗಿರುವ ಘಟನೆ ನಾಪೋಕ್ಲು ಸಮೀಪದ ಎಮ್ಮೆಮಾಡುವಿನ ಕೂರುಳಿಯಲ್ಲಿ ನಡೆದಿದೆ.

ನಾಪೋಕ್ಲು ಸಮೀಪದ ಚೇರಂಬಾಣೆ ಗ್ರಾಮದ ಗಿರೀಶ್‌ (16),ಅಯ್ಯಪ್ಪ (18) ಎಂಬುವ ಯುವಕರೇ ಕಾವೇರಿ ನದಿಯಲ್ಲಿ ಈಜಲು ತೆರಳಿ ಜಲ ಸಮಾಧಿ ಆಗರುವ ದುರ್ದೈವಿಗಳು.

ಈ ಪೈಕಿ ಓರ್ವನ ಮೃತದೇಹ ಸಿಕ್ಕಿದ್ದು, ಇನ್ನೊರ್ವನ ಮೃತದೇಹದ ಶೋಧ ಕಾರ್ಯ ನಡೆಯುತ್ತಿದೆ.

ಸ್ಥಳಕ್ಕೆ ನಾಪೋಕ್ಲು ಪಿ.ಎಸ್.ಐ ಮಂಜುನಾಥ್‌ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Tags:
error: Content is protected !!