ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆ ಪಟ್ಟಿಯಲ್ಲಿ 4 ಕ್ಷೇತ್ರ ಕಡಿಮೆ: ೫ ತಾಲ್ಲೂಕು ಪಂಚಾಯಿತಿಗಳ ಪುನರ್ವಿಂಗಡಣೆ
ಮಡಿಕೇರಿ: ಸರ್ಕಾರ ಹೊರಡಿಸಿರುವ ಕೊಡಗು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆ ಪಟ್ಟಿಯಲ್ಲಿ ಈ ಹಿಂದೆ ಇದ್ದ ಒಟ್ಟು 26 ಜಿ.ಪಂ. ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳು ಕಡಿಮೆಯಾಗಿದೆ. ಇದರಿಂದ ಜಿಲ್ಲೆಯ ಜಿ.ಪಂ. ಕ್ಷೇತ್ರ 25ಕ್ಕೆ ಕುಸಿದಿದೆ.
ಕೊಡಗು ಜಿಲ್ಲೆಯಲ್ಲಿದ್ದ 29 ಜಿ.ಪಂ. ಕ್ಷೇತ್ರಗಳನ್ನು 25 ಕ್ಷೇತ್ರಗಳಿಗೆ ಪುನರ್ವಿಂಗಡಣೆ ಮಾಡಲಾಗಿದೆ. ಮಡಿಕೇರಿ ತಾಲ್ಲೂಕಿನ ಮಕ್ಕಂದೂರು, ಕಾಂತೂರು ಮೂರ್ನಾಡು, ನಾಪೋಕ್ಲು, ಸಂಪಾಜೆ, ಭಾಗಮಂಡಲ, ಚೆಯ್ಯಂಡಾಣೆ (ನರಿಯಂದಡ), ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ, ಶನಿವಾರಸಂತೆ, ಬಳಗುಂದ, ಶಾಂತಳ್ಳಿ, ಮಾದಾಪುರ, ಕುಶಾಲನಗರ ತಾಲ್ಲೂಕಿನ ವಾಲ್ನೂರು ತ್ಯಾಗತ್ತೂರು, ಗುಡ್ಡೆಹೊಸೂರು, ಕೂಡುಮಂಗಳೂರು, ಕೂಡಿಗೆ, ಸುಂಟಿಕೊಪ್ಪ, ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲ, ಚೆನ್ನಯ್ಯನಕೋಟೆ, ಅಮ್ಮತ್ತಿ, ಕಾಕೋಟುಪರಂಬು, ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆ, ಗೋಣಿಕೊಪ್ಪಲು, ತಿತಿಮತಿ, ಶ್ರೀಮಂಗಲ, ಪೊನ್ನಂಪೇಟೆ ಕ್ಷೇತ್ರಗಳಾಗಿ ಪುನರ್ವಿಂಗಡಣೆ ಮಾಡಲಾಗಿದೆ.





