Mysore
24
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಕರ್ತವ್ಯದಲ್ಲಿದ್ದ ಕೊಡಗಿನ ಯೋಧ ಹೃದಯಾಘಾತದಿಂದ ಕೊನೆಯುಸಿರು

ಮಡಿಕೇರಿ: ಕರ್ತವ್ಯದಲ್ಲಿದ್ದ ಕೊಡಗಿನ ಯೋಧರೊಬ್ಬರು ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ಉತ್ತರಾಖಂಡ್‌ನ ಜೋಷಿ ಮತ್ತ್‌ನಲ್ಲಿ ನಡೆದಿದೆ.

ಸೋಮವಾರಪೇಟೆ ತಾಲ್ಲೂಕಿನ ತಾಕೇರಿ ಮೂಲದ ಮಹೇಶ್ (೪೬) ಮೃತ ಯೋಧ. ಜೂನಿುಂರ್ ಕಮೀಷನ್ ಆಫೀಸರ್ ಆಗಿ ಉತ್ತರಾಖಂಡ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ, ಕಳೆದ ತಿಂಗಳಷ್ಟೇ ರಜೆಯಲ್ಲಿ ಊರಿಗೆ ಬಂದು ಸೇವೆ ಮರಳಿದ್ದರು. ಕಳೆದ ೨೨ ವರ್ಷದಿಂದ ಭಾರತೀಯಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹೇಶ್, ನಾಲ್ಕು ವರ್ಷದಲ್ಲಿ ನಿವೃತ್ತಿ ಹೊಂದಲಿದ್ದರು.
ಬೆಂಗಳೂರು ಹೈದ್ರಾಬಾದ್, ಜಮ್ಮು-ಕಾಶ್ಮೀರ್, ಉತ್ತರಾಖಂಡ್ ಸೇರಿದಂತೆ ವಿವಿಧ ಭಾಗದಲ್ಲಿ ಸೇವೆ ಸಲ್ಲಿಸಿದ್ದರು. ಇನ್ನೆರಡು ದಿನಗಳಲ್ಲಿ ಹುಟ್ಟೂರಿಗೆ ಯೋಧನ ಪಾರ್ಥಿವ ಶರೀರ ಬರಲಿದೆ. ಮಹೇಶ್ ಅವರು, ಪತ್ನಿ, ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!