Mysore
20
overcast clouds
Light
Dark

ಸರ್ಕಾರಿ ಶಾಲೆಗಳಿಂದ ವಿದ್ಯಾರ್ಥಿಗಳ ಜ್ಞಾನ ಮತ್ತು ವ್ಯಕ್ತಿತ್ವ ವಿಕಾಸವಾಗುತ್ತದೆ : ಜಿ.ಟಿ.ದೇವೇಗೌಡ

ಮೈಸೂರು : ಸರ್ಕಾರಿ ಶಾಲೆಗಳಿಂದ ವಿದ್ಯಾರ್ಥಿಗಳ ಜ್ಞಾನ ಮತ್ತು ವ್ಯಕ್ತಿತ್ವ ವಿಕಾಸವಾಗುತ್ತದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಮೈಸೂರು ತಾ. ಕೆ. ಹೆಮ್ಮನಹಳ್ಳಿ  ಗ್ರಾಮದಲ್ಲಿ ನಾಲ್ಕು ಹೊಸ ಕೊಠಡಿಗಳು ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ನೈಜ ಪ್ರತಿಭೆ ಹೊರಹೊಮ್ಮತ್ತದೆ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ರಾಜಕೀಯ,ಸಾಹಿತ್ಯ, ಸಿನಿಮಾ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

ಕೆ. ಹೆಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ಅನುಭವಮಂಟಪ ನಾಟಕ ಅಭಿನಯಿಸುತ್ತಿರುವುದು  ತುಂಬಾ ಸಂತಸದ ವಿಷಯ. ಒಂದು ಎಕರೆ ಜಾಗದಲ್ಲಿ ನಾಲ್ಕು ಕೊಠಡಿಗಳು ನಿರ್ಮಾಣವಾಗಿದ್ದು, ಈ ಶಾಲೆಗೆ ಅಗತ್ಯವಾದ ಶೌಚಾಲಯ, ನೀರು ಮತ್ತು ಕಾಂಪೌಂಡ್ ಸೌಲಭ್ಯಗಳನ್ನು ಕೂಡಲೇ ಬೋಗಾದಿ ಪಟ್ಟಣ ಪಂಚಾಯಿತಿಯವರು ನಿರ್ಮಿಸಲು ಸ್ಥಳದಲ್ಲಿಯೇ ಮುಖ್ಯಾಧಿಕಾರಿಗಳಿಗೆ ಆದೇಶಿಸಿದರು.

ವಿದ್ಯಾರ್ಥಿಗಳು ತಂದೆ ತಾಯಿಗಳನ್ನು ಗೌರವಿಸಬೇಕು ಮತ್ತು ಅವರಿಗೆ ವಯಸ್ಸಾದ ಮೇಲೆ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ನೀತಿ ಪಾಠ ಹೇಳಿದರು. ಶಾಲಾವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ನೃತ್ಯ, ಅನುಭವಮಂಟಪ ನಾಟಕ ಮತ್ತು ಛದ್ಮವೇಷ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಬಿ.ಆರ್.ಸಿ ಮಹದೇವು, ಬೋಗಾದಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ. ಬಸವರಾಜು, ಮಾಜಿ ಜಿ.ಪಂ. ಸದಸ್ಯ ಮರಿಜೋಗಿಗೌಡ, ಮಾಜಿ ಗ್ರಾ.ಪಂ ಸದಸ್ಯರಾದ ಎಂ ಗಣೇಶ್, ರಮೇಶ್, ಹನುಮೇಶ್, ಎಂ.ಆರ್.ಮಾಣಿಕ್ಯಂ, ವಸಂತ, ಪೂರ್ಣಿಮಾ, ಮಾಲೇಗೌಡ, ಮಹದೇವ್, ರಮೇಶ್, ಪುನೀತ್ ಕುಮಾರ್, ಗುರುಪ್ರಸಾದ್, ನಾಗಮಣಿ, ರೂಪ ಕುಮಾರಸ್ವಾಮಿ, ಸಿದ್ಧಲಿಂಗು, ಲಲಿತ, ಮಂಜುನಾಥ್ ಶಾಲಾ ಮುಖ್ಯ ಶಿಕ್ಷಕಿ ಸುಮಂಗಲ ಸಹಶಿಕ್ಷಕರುಗಳಾದ ಕುಮಾರಸ್ವಾಮಿ, ತಾರಾ, ಕಲ್ಪನಾಬಾಯಿ ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ