ಮೈಸೂರು: ನಗರದ ವಿದ್ಯಾರಣ್ಯಪುರಂ ನಿವಾಸಿ ರವಿ ಕಿರಣ್ (೩೨) ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ನೀಡುತ್ತಿರುವ ವೈದ್ಯರು ಮೂತ್ರಪಿಂಡ ಕಸಿಗೆ ಸಲಹೆ ನೀಡಿದ್ದಾರೆ. ಕಡು ಬಡವರಾದ ಇವರಿಗೆ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಭಾರೀ ಮೊತ್ತ ಭರಿಸಿ ಮೂತ್ರಪಿಂಡ ಕಸಿ ಮಾಡಿಸಿಕೊಳ್ಳುವುದು ಕಷ್ಟ ಸಾಧ್ಯವಾಗಿರುವುದರಿಂದ ದಾನಿಗಳು ಉದಾರವಾಗಿ ದೇಣಿಗೆ ನೀಡಿ ಸಹಕರಿಸುವಂತೆ ಮನವಿ ಮಾಡಿದ್ದಾರೆ. ದಾನಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿ.ವಿ. ಮಾರುಕಟ್ಟೆ ಶಾಖೆಯ ಉಳಿತಾಯ ಖಾತೆ ಸಂಖ್ಯೆ ೬೪೦೩೩೪೬೭೬೦೭, ಐಎಫ್‌ಎಸ್‌ಸಿ-ಎಸ್‌ಬಿಐಎನ್‌೦೦೪೦೦೬೦ಗೆ ದೇಣಿಗೆ ನೀಡಬಹುದು. ಹೆಚ್ಚಿನ ಮಾಹಿತಿಗೆ ಮೊ. ೭೦೨೨೯೨೦೦೭೨ ಸಂಪರ್ಕಿಸಬಹುದು.