ಮೈಸೂರು : ನಿನ್ನೆ ರಾತ್ರಿ ಹೃದಯಾಘಾತದಿಂದ ಅರಣ್ಯ ಸಚಿವ ಉಮೇಶ್ ಕತ್ತಿ ಅವರು ನಿಧನರಾದ ಹಿನ್ನೆಲೆಯಲ್ಲಿ ನಗರದ ದಸರಾ ಗಜಪಡೆಗಳಿಗೆ ನಡೆಯಬೇಕಿದ್ದ ಸಾಂಪ್ರದಾಯಿಕ ಪೂಜೆಯನ್ನು ರದ್ದು ಮಾಡಲಾಗಿದೆ.
ಈ ಬಗ್ಗೆ ಡಿಸಿಎಫ್ ಕರಿಕಾಳನ್ ಅವರು ಮಾಹಿತಿಯನ್ನು ನೀಡಿದ್ದು, ಇಂದು ದಸರಾ ಆನೆಗಳಿಗೆ 2 ನೇ ಹಂತದ ಸಾಂಪ್ರದಾಯಿಕ ಪೂಜೆ ನೆರವೇರಬೇಕಿತ್ತು, ಆದರೆ ಸಚಿವರ ನಿಧನದ ಹಿನ್ನೆಲೆಯಲ್ಲಿ ಪೂಜೆಯನ್ನು ರದ್ದುಗೊಳಿಸಲಾಗಿದೆ ಎಂದರು.
ನಾಳೆ ಗಜಪಡೆಗಳಿಗೆ ಸಿಡಿಮದ್ದು ತಾಲೀಮು : ದಸರಾ ಗಜಪಡೆಯ ಆನೆಗಳಿಗೆ ಮೊದಲ ಹಂತದಲ್ಲಿ ಸಿಡಿಮದ್ದು ತಾಲೀಮು ನಡೆಸಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ, ಸೆ. 9 ರಂದು ಮೊದಲ ಹಂತದಲ್ಲಿ ಆಗಮಿಸಿದ 9 ಗಜಪಡೆಗಳಿಗೆ ಹಾಗೂ 2ನೇ ಹಂತದ 5 ಗಜಪಡೆಗಳನ್ನು ಒಟ್ಟಾಗಿ ತೂಕ ಹಾಕಿಸಲಾಗುವುದು ಎಂದು ಡಿಸಿಎಫ್ ಕರಿಕಾಳನ್ ಅವರು ಮಾಹಿತಿ ನೀಡಿದ್ದಾರೆ.