ಸುತ್ತೂರು : ನಂಜನಗೂಡು ತಾಲೂಕು. ಕಾರ್ಯ ಗ್ರಾಮದ ಪ್ರಸಿದ್ಧವಾದ ಸಿದ್ದೇಶ್ವರ ಬೆಟ್ಟದ ಜಾತ್ರೆಯು ಬಹಳ ವಿಜೃಂಭಣೆಯಿಂದ ಜರಗಿತು.
ಈ ಜಾತ್ರೆಗೆ ಮುಂಜಾನೆ ವೇಳೆಯಲ್ಲಿ ಶ್ರೀಮಠದಿಂದ ಜರುಗಿದ ಪಲ್ಲಕ್ಕಿ ಉತ್ಸವಕ್ಕೆ ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಪುಷ್ಪಾರ್ಚನೆ ನೀಡುವ ಮೂಲಕ ಚಾಲನೆ ಕೊಟ್ಟರು.
ನಂತರ ಗ್ರಾಮದಿಂದ 12 ಗಂಟೆಗೆ ರಥವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಗ್ರಾಮದ ಭಕ್ತಾದಿಗಳ ಸಮ್ಮುಖದಲ್ಲಿಸಿದ್ದೇಶ್ವರ ಬೆಟ್ಟಕ್ಕೆ ಸುಲಲಿತವಾಗಿ. ಶಾಂತಿಯುತವಾಗಿ. ಕಾರ್ಯ ಸಿದ್ದೇಶ್ವರ ಬೆಟ್ಟಕ್ಕೆ 2: ಗಂಟೆ 20 ನಿಮಿಷಕ್ಕೆ. ಸರಿಯಾಗಿ ಸಿದ್ದೇಶ್ವರ ಬೆಟ್ಟ ತಲುಪಿತು.
ಈ ಜಾತ್ರೆಯಲ್ಲಿ ಟಿ ನರಸೀಪುರ. ನಂಜನಗೂಡು. ಕೊಳ್ಳೇಗಾಲ. ಗುಂಡ್ಲುಪೇಟೆ. ಚಾಮರಾಜನಗರ. ಮಂಡ್ಯ. ಎಚ್ ಡಿ ಕೋಟೆ. ಮುಂತಾದ ಜಿಲ್ಲೆಗಳಿಂದ. ಎರಡು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಈ ಜಾತ್ರೆಯಲ್ಲಿ ಭಾಗವಹಿಸಿದರು.
ಈ ಜಾತ್ರೆಯು ಕಳೆದ ಎರಡು ವರ್ಷಗಳಿಂದ ಕರೋನಾ ಮಹಾಮಾರಿ ಯಿಂದ ಸರಳವಾಗಿ ಆಚರಿಸಿದರು. ಆದರೆ ಈ ಬಾರಿ ಗ್ರಾಮಸ್ಥರು ಎಲ್ಲ ಒಗ್ಗೂಡಿ.ಒಮ್ಮತವಾಗಿ ಅದ್ಧೂರಿಯಾಗಿ ಆಚರಿಸಿದರು..
ಈ ಜಾತ್ರೆ ಅಂಗವಾಗಿ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ. ಎಲ್ಲ ಬೀದಿಗಳಲ್ಲಿ ಸ್ವಚ್ಛತೆ ಯಾಗಿ. ಬೆಟ್ಟಕ್ಕೆ ಬರುವ ಎಲ್ಲ ಭಕ್ತರಿಗೂ. 8 ಟ್ಯಾಕ್ಟರ್ ಮೂಲಕ. ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಲಾಗಿತ್ತು..
ಈ ಜಾತ್ರೆಯು ಶಾಂತಿಯುತವಾಗಿ ಸುಲಲಿತವಾಗಿ. ನಡೆಸಲು ನಂಜನಗೂಡು ಡಿವೈಎಸ್ಪಿ ಗೋವಿಂದರಾಜು. ತಹಸಿಲ್ದಾರ್. ಶಿವಮೂರ್ತಿ. ಸರ್ಕಲ್ ಇನ್ಸ್ಪೆಕ್ಟರ್. ತಳವಾರ್. ಕೌಲಂದೆ ಸಬ್ ಸ್ಪೆಕ್ಟರ್
ಮಹೇಂದ್ರ. ಬಿಲಿಗೆರೆ ಸಬ್ ಇನ್ಸ್ಪೆಕ್ಟರ್ ಆರತಿ. ಸೇರಿದಂತೆ 200 ಪೊಲೀಸ್ ಸಿಬ್ಬಂದಿ ವರ್ಗ ಹಾಜರಿದ್ದು
ಅಲ್ಲದೆ.ಈ ಜಾತ್ರೆಗೆ ಕೆಎಸ್ಆರ್ ಟಿಸಿ ಅಧಿಕಾರಿ ಶಂಕರ್. ಎಸ್ ವಿ ನಾರಾಯಣ. ಸ್ಥಳದಲ್ಲಿ ಹಾಜರಿದ್ದು
ನಂಜನಗೂಡು ತಾಲ್ಲೂಕಿನಿಂದ. ಟಿ ನರ್ಸಿಪುರ. ಚಾಮರಾಜನಗರ. ಕೊಳ್ಳೇಗಾಲ.ಮುಂತಾದ ತಾಲೂಕುಗಳಿಗೆ ಕೆಎಸ್ಆರ್ಟಿಸಿ ಬಸ್ ಗಳನ್ನು ವ್ಯವಸ್ಥೆಮಾಡಿ ಭಕ್ತಾದಿಗಳಿಗೆ ಅನುಕೂಲವಾಯಿತು.
ಈ ಜಾತ್ರೆಗೆ ವಿಶೇಷವಾಗಿ ರೈತರುಗಳು. ಕಾರ್ಯ ಸುತ್ತಮುತ್ತ ಗ್ರಾಮಗಳ ಸಾವಿರಾರು. ಹಸುಗಳನ್ನು . ಎತ್ತಿನಗಾಡಿ. ಮೆರವಣಿಗೆ ಮೂಲಕ ಸಿದ್ದೇಶ್ವರ ಬೆಟ್ಟಕ್ಕೆ ಬಂದು . ಪಂಜಿನ ಸೇವೆ ಪೂಜೆ ನೀಡಿ ಪುನೀತರಾದರು.





