Mysore
22
few clouds

Social Media

ಗುರುವಾರ, 10 ಏಪ್ರಿಲ 2025
Light
Dark

ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಯು ಜನರಿಗೆ ಅತ್ಯುತ್ತಮ ಸೇವೆ ನೀಡುತ್ತಿದೆ : ಮಾಜಿ ಶಾಸಕಿ ಪರಿಮಳಾ ನಾಗಪ್ಪ

ಚಾಮರಾಜನಗರ : ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಯು ಈ ಭಾಗದ ಜನರಿಗೆ ಅತ್ಯುತ್ತಮ ಸೇವೆ ನೀಡುತ್ತಿದೆ ಎಂದು ಮಾಜಿ ಶಾಸಕಿ ಪರಿಮಳಾ ನಾಗಪ್ಪ ಹೇಳಿದರು.

ಕಾಲೇಜಿನ ರಜತಮಹೋತ್ಸವ ಕಾರ್ಯಕ್ರಮದ ಚಿತ್ರ
ಕಾಲೇಜಿನ ರಜತಮಹೋತ್ಸವ ಕಾರ್ಯಕ್ರಮದ ಚಿತ್ರ

ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನ ಕಾಮಗೆರೆಯಲ್ಲಿರುವ  ಹೋಲಿಕ್ರಾಸ್ ನರ್ಸಿಂಗ್ ಕಾಲೇಜಿನ ರಜತಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಹಾವು ಕಚ್ಚುವ ಪ್ರಕರಣ, ಅಪಘಾತ ಸೇರಿದಂತೆ ಯಾವುದೇ ಪ್ರಕರಣ ನಡೆದರೂ ಮೊದಲು ಜನ ಹೋಲಿಕ್ರಾಸ್ ಆಸ್ಪತ್ರೆಯೆಡೆಗೆ ಬರುತ್ತಾರೆ. ಇಲ್ಲಿನ ಸಿಬ್ಬಂದಿ ಸೇವಾ ಮನೋಭಾವದಿಂದಲೇ ನೋಡುತ್ತಾರೆ. ಇದರಿಂದಲೇ ಈ ಸಂಸ್ಥೆ ಬಗ್ಗೆ ಜನರಲ್ಲೂ ಸದಾಭಿಪ್ರಾಯವಿದೆ ಎಂದು ನುಡಿದರು.

 ರಜತಮಹೋತ್ಸವ ಕಾರ್ಯಕ್ರಮದಲ್ಲಿನ ಗಣ್ಯರು
ರಜತಮಹೋತ್ಸವ ಕಾರ್ಯಕ್ರಮದಲ್ಲಿನ ಗಣ್ಯರು

ಮಕ್ಕಳ ತಜ್ಞ ಡಾ.ಶಿವು ಮಾತನಾಡಿ, ಈ ಭಾಗದಲ್ಲಿ ನಾನು ಕೆಲಸ ಮಾಡಿದ್ದೇನೆ. ಚಿಕಿತ್ಸೆ ವಿಚಾರದಲ್ಲಿ ಹೋಲಿಕ್ರಾಸ್ ಸಂಸ್ಥೆಯ ಸಿಬ್ಬಂದಿ ಸೇವೆ ಸ್ಮರಣೀಯ. ಇಂಥ ಮನೋಭಾವದಿಂದಲೇ ಯಾವುದೇ ಸಂಸ್ಥೆ ಬೆಳೆಯಲು ಸಾಧ್ಯ ಎಂದು ಹೇಳಿದರು.

 ರಜತಮಹೋತ್ಸವ ಕಾರ್ಯಕ್ರಮದಲ್ಲಿನ ಗಣ್ಯರು
ರಜತಮಹೋತ್ಸವ ಕಾರ್ಯಕ್ರಮದಲ್ಲಿನ ಗಣ್ಯರು

ಕೊಳ್ಳೇಗಾಲ ಪಿಎಸ್‌ಐ ಬಿ.ಸಿ.ಮಂಜುನಾಥ್ ಮಾತನಾಡಿ, ಗ್ರಾಮಾಂತರ ವ್ಯಾಪ್ತಿಯಲ್ಲಿ ಯಾವುದೇ ತುರ್ತು ಪ್ರಕರಣವಿದ್ದಾಗ ನಾವು ಹೋಲಿಕ್ರಾಸ್ ಸಂಸ್ಥೆ ಸಂಪರ್ಕಿಸುತ್ತೇವೆ. ಮೊದಲು ಇಲ್ಲಿ ಸೇವೆ ಪಡೆದವರು ನಂತರ ಬೇರೆ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆ ಹೋಗುತ್ತಾರೆ. ಪೊಲೀಸ್ ಇಲಾಖೆಯ ಹೆಚ್ಚಿನ ಪ್ರಕರಣಗಳಿಗೆ ಇಲ್ಲಿಯೇ ಚಿಕಿತ್ಸೆ ಸಿಗುವುದನ್ನು ನಾನೇ ನೋಡಿದ್ದೇನೆ ಎಂದು ಶ್ಲಾಘಿಸಿದರ

ಕಾರ್ಯಕ್ರಮದಲ್ಲಿ  ಮೈಸೂರು ಬಿಷಪ್ ಥಾಮಸ್ ವಾಜಪಿಳ್ಳೈ, ಆರೋಗ್ಯ ವಿವಿ ಸೆನೆಟ್ ಸದಸ್ಯರಾದ ಡಾ.ಬಿಂದು ಮ್ಯಾಥ್ಯು, ಕಾಂಗ್ರೆಸ್ ಮುಖಂಡ ಪುಟ್ಟರಾಜು, ಶಿನಿಜೋಸ್, ಫಾದರ್ ಶಾಂತರಾಜ್, ಪ್ರಾಂಶುಪಾಲರಾದ ಲೂಸಿ ಜಾನ್ ಮತ್ತಿತರರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ