ಸುದ್ದಿಗೋಷ್ಠಿಯಲ್ಲಿ ಅರಕಲವಾಡಿ ಗುರುಸ್ವಾಮಿ ಸಲಹೆ
ಚಾಮರಾಜನಗರ: ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರ ವಿರುದ್ದ ಕಾಡಾಧ್ಯಕ್ಷರಾದ ನಿಜಗುಣರಾಜು ಮೊದಲು ಇಡಿ ಮತ್ತು ಐಟಿಗೆ ದೂರು ನೀಡಲಿ. ಶಾಸಕರು ದಾಖಲೆಗಳನ್ನು ಒದಗಿಸಿ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರಕಲವಾಡಿ ಗುರುಸ್ವಾಮಿ ತಿಳಿಸಿದರು.
ನಿಜಗುಣರಾಜು ಅವರು ಮೊದಲು ದೂರು ನೀಡಿ ನಂತರ ಶಾಸಕರ ವಿರುದ್ಧ ಆರೋಪ ಮಾಡಬೇಕಿತ್ತು. ಆದರೆ, ಅವರು ದೂರು ನೀಡುವುದಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಶಾಸಕರು ತೆರಕಣಾಂಬಿ ಬಳಿ ಕಪ್ಪುಕಲ್ಲು ಕ್ವಾರಿ ಖರೀದಿಸುವಾಗ ಕ್ವಾರಿ ಮಾಲೀಕರುಗಳಿ ೯ ಕೋಟಿ ರೂ. ನಗದು ನೀಡಿದ್ದಾಗಿ ಹೇಳಿದ್ದಾರೆ. ಆ ಹಣ ಯಾವುದು ಎಂಬುದನ್ನು ಶಾಸಕರು ಸಂಬAಧಿಸಿದವರಿಗೆ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.
ಕಪ್ಪು ಕಲ್ಲಿಗೆ ಅಂತರಾಷ್ಟಿçÃಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದ್ದು, ಬೆಲೆಯು ಕೂಡ ಆಗಾಗ್ಗೆ ದುಬಾರಿಯಾಗಿ ಅಧಿಕ ಲಾಭಾಂಶ ಬರುತ್ತದೆ. ಈ ಬಗ್ಗೆ ನಿಜಗುಣರಾಜು ಅವರು ಅರಿತುಕೊಳ್ಳಬೇಕು. ಜನಪ್ರತಿನಿಧಿಯೊಬ್ಬರು ಕಾನೂನುಬದ್ದವಾಗಿ ಆಸ್ತಿ ಸಂಪಾದನೆ ಮಾಡಬಾರದು ಎಂಬ ಯಾವುದಾದರೂ ಕಾನೂನು ಇದೆಯೇ ಎಂದು ಪ್ರಶ್ನಿಸಿದರು.
ನಿಜಗುಣರಾಜು ಅವರಿಗೆ ಕಪ್ಪು ಕಲ್ಲಿನ ವಹಿವಾಟು ಬಗ್ಗೆ ಅರಿವಿಲ್ಲದೆ ಶಾಸಕರ ವಿರುದ್ದ ಆರೋಪ ಮಾಡಿದ್ದಾರೆ. ಪುಟ್ಟರಂಗಶೆಟ್ಟಿ ಅವರು ಶಾಸಕರಾಗುವುದಕ್ಕೂ ಮೊದಲು ಕಪ್ಪುಕಲ್ಲು ಗಣಿ ವ್ಯವಹಾರವನ್ನು ಕಾನೂನು ಬದ್ದವಾಗಿ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಶಾಸಕರು ಗಣಿಗಾರಿಕೆ ಮಾಡಿ ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಆರೋಪವನ್ನು ಮಾಡಿದ್ದಾರೆ. ಪುಟ್ಟರಂಗಶೆಟ್ಟಿ ಅವರಿಗೆ ೩೧ ಎಕರೆ ತೋಟವಿದೆ ಎಂಬುದು ನಿಜಗುಣರಾಜು ಅವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ ಅವರು, ಶಾಸಕರು ನಿಯಮಿತವಾಗಿ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ. ಹಾಗಾಗಿ ಅವರಿಗೆ ಬ್ಯಾಂಕ್‌ನಿಂದ ಕೋಟ್ಯಂತರ ರೂ. ಸಾಲ ದೊರಕುತ್ತದೆ ಎಂದರು.