ಚಾಮರಾಜನಗರ : ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಸಲಾದ ಭಾರತ್ ಜೋಡೊ ಯಾತ್ರೆಯು ನೆನ್ನೆ ದಿನ ಗುಂಡ್ಲುಪೇಟೆಯಿಂದ ಆರಂಭಗೊಂಡಿದ್ದು ಈ ಯಾತ್ರೆಯಲ್ಲಿ ಭಾಗವಹಿಸಿದ್ದ ಯುವಕನೋರ್ವ paycm ಟೀ ಶರ್ಟ್ ಹಾಗೂ ಧ್ವಜ ಹಿಡಿದು ಯಾತ್ರೆಯಲ್ಲಿ ಪಾಲ್ಗೊಂಡ ಹಿನ್ನೆಲೆ ಇದು ಮುಖ್ಯಮಂತ್ರಿ ಅವರಿಗೆ ಮಾಡಿದ ಅವಮಾನವಾಗಿದೆ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಗಿದ್ದು, ಈ ಸಂಬಂಧ ಯುವಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಗುಂಡ್ಲುಪೇಟೆಯ ಪುರಸಭಾ ಸದಸ್ಯ ಕಿರಣ್ ಗೌಡ ಹಾಗೂ ಸುರೇಶ್ ಎಂಬುವವರೇ ಚಾಮರಾಜನಗರದ ಸಿ ಇ ಎನ್ ಠಾಣೆಯಲ್ಲಿ ವಿಜಯಪುರ ಮೂಲದ ಅಕ್ಷಯ್ ಕುಮಾರ್ ಎಂಬಾತನ ವಿರುದ್ಧ ದೂರು ನೀಡಿ ಪೇ ಸಿಎಂ ಬಾವುಟ ಹಿಡಿದು paycm ಟೀ ಶರ್ಟ್ ಧರಿಸಿರುವುದು ರಾಜ್ಯದ ಮುಖ್ಯಮಂತ್ರಿಗಳಿಗೆ ಮಾಡಿದ ಅವಮಾನವಾಗಿದೆ.

ಅಕ್ಷಯ್ ಕುಮಾರ್ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ ಹಿನ್ನೆಲೆ ಯುವಕನ ವಿರುದ್ಧ ಸೈಬರ್ ಕ್ರೈಂ ಪೊಲೀಸ್ o ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.





