ಮಂಡ್ಯ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಮಂಡ್ಯದಲ್ಲಿ ಇಂದು ಭಾರದ್ ಜೋಡೋ ಯಾತ್ರೆ ಮುಂದುವರೆದಿದೆ.

ಇಂದು ನಾಗಮಂಗಲ ಪುರಸಭಾ ವ್ಯಾಪ್ತಿಯ ಕೆ ಮಲ್ಲೇನಹಳ್ಳಿಯಿಂದ ಆರಂಭಗೊಂಡ ಭಾರತ ಜೋಡೋ ಯಾತ್ರೆಯಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್, ಕೇಂದ್ರದ ಮಾಜಿ ಕಾನೂನು ಸಚಿವ ಜಯರಾಮ್ ರಮೇಶ್ ಸೇರಿದಂತೆ ಹಲವರು ಇದ್ದರು.

ಡೊಳ್ಳು ಕುಣಿತ ಕಲಾವಿದರ ಜೇಂಕಾರ ಪೂಜಾ ಕುಣಿತ ಸೋಮನ ಕುಣಿತ ವಿಶೇಷವಾಗಿ ಗಾಂಧಿವೇಷ ಧರಿಸಿದ ಕಾರ್ಯಕರ್ತ ಜನರಿಗೆ ಕೈಬೀಸುತ್ತಾ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.

ರಾಹುಲ್ ಗಾಂಧಿಯನ್ನು ನೋಡಲು ಬಂದ ಬಾಲಕಿಯರನ್ನು ಬಳಿಗೆ ಕರೆದು ಮಾತನಾಡಿಸಿದ ರಾಹುಲ್ ಗಾಂಧಿಯವರಿಗೆ ಪಟ್ಟಣದ ಸೌಮ್ಯ ಕೇಶವ ಸ್ವಾಮಿ ದೇವಸ್ಥಾನದ ಅರ್ಚಕರಾದ ತಿರು ನಾರಾಯಣ್ ಅವರು ಮಾಲಾರ್ಪಣೆ ಮಾಡಿದರು. ರಾಹುಲ್ ಗಾಂಧಿಯವರನ್ನು ಅಭಿಮಾನಿಗಳು ರಾಹುಲ್ ಗೌಡ ಎಂದು ಕೂಗಿ, ಪಾದಯಾತ್ರೆಗೆ ಮತ್ತಷ್ಟು ಸಾಥ್ ನೀಡಿದರು.





