Mysore
15
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ಜಿಮ್ ಟ್ರೈನರ್ ಪತ್ನಿ ಅನುಮಾನಾಸ್ಪದ ಸಾವು

ಕೊಲೆ ಆರೋಪ; ಪತಿ ವಿರುದ್ಧ ದೂರು

ಮೈಸೂರು: ಜಿಮ್ ಟ್ರೈನರ್ ಪತ್ನಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಕೊಲೆ ಆರೋಪದಲ್ಲಿ ಅವರ ಪತಿ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದಯಗಿರಿಯ ರೆಹಮಾನ್ ರಸ್ತೆಯ ನಿವಾಸಿ ತರನುಮ್ ಖಾನಂ(೨೨) ಅವರೇ ಮೃತಪಟ್ಟವರು. ಇವರ ಪತಿ ಸೈಯದ್ ಉಮರ್ ಮತ್ತು ಅಮೀನ್ ಬಾನು (ಉಮರ್ ಅವರ ಅಕ್ಕ) ವಿರುದ್ಧ ತರನುಮ್ ತಾಯಿ ನಾಜೀಮಾ ದೂರು ನೀಡಿದ್ದಾರೆ.

ತರನುಮ್ ಖಾನಂ ಅವರನ್ನು ೨೦೧೯ರಲ್ಲಿ ಸೈಯದ್ ಉಮರ್ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಮಯದಲ್ಲಿ ೭ ಲಕ್ಷ ರೂ.ಗಳನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಚಿನ್ನ ಕೊಡುವಂತೆ ಕೇಳಿದಾಗ ಇದಕ್ಕೆ ೬.೫೦ ಲಕ್ಷ ರೂ.ಗಳನ್ನು ನೀಡುವುದಾಗಿ ಹೇಳಿ, ಮದುವೆಗೂ ಎರಡು ತಿಂಗಳ ಮುಂಚೆ ೫ ಲಕ್ಷ ರೂ. ನೀಡಲಾಗಿತ್ತು. ಈಗ ಈ ದಂಪತಿಗೆ ೧೧ ತಿಂಗಳ ಗಂಡು ಮಗು ಇದೆ.

ಒಂದು ವರ್ಷದ ಹಿಂದೆ ಜಿಮ್ ಆರಂಭಿಸಿದ್ದ ಸೈಯದ್ ಉಮರ್ ಅದರ ನಿರ್ವಹಣೆಗೆ ಹಣ ತರುವಂತೆ ಪತ್ನಿಗೆ ದೈಹಿಕ ಹಲ್ಲೆ ಮಾಡಿ ಕಿರುಕುಳ ನೀಡುತ್ತಿದ್ದರು. ಈ ಸಂಬಂಧ ಹಿರಿಯರ ಸಮ್ಮುಖದಲ್ಲಿ ನ್ಯಾಯ ಮಾಡಿ ಉಮರ್‌ಗೆ ಬುದ್ಧಿವಾದ ಹೇಳಿ, ಪತ್ನಿಯನ್ನು ಮನೆಗೆ ಕಳುಹಿಸಲಾಗಿತ್ತು. ಆ ನಂತರವೂ ಕಿರುಕುಳ ನೀಡುವುದನ್ನು ನಿಲ್ಲಿಸದ ಉಮರ್ ನ.೧೦ರಂದು ತಡರಾತ್ರಿ ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರಿನನ್ವಯ ಉದಯಗಿರಿ ಠಾಣೆಯಲ್ಲಿ ವರದಕ್ಷಿಣೆ ನಿಷೇಧ ಕಾಯಿದೆ ೧೯೬೨ ಮತ್ತು ಸೆಕ್ಷನ್ ೩೦೨ ಅಡಿ ಪ್ರಕರಣ ದಾಖಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!