Mysore
25
mist

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಸಂಘರ್ಷದ ವಿಡಿಯೋ ಇತ್ತೀಚಿನದ್ದಲ್ಲ: ಭಾರತೀಯ ಸೇನೆ ಸ್ಪಷ್ಟನೆ

ಮೈಸೂರು: ಭಾರತ-ಚೀನಾ ನಡುವಿನ ಗಡಿಯಲ್ಲಿ ಮತ್ತೊಮ್ಮೆ ಎರಡು ದೇಶಗಳ ಸೈನಿಕರ ನಡುವೆ ಸಂಘರ್ಷ ನಡೆದಿದೆ. ಅರುಣಾಚಲ ಪ್ರದೇಶದ ತವಾಂಗ್ ಗಡಿಯಲ್ಲಿ ಗಡಿ ದಾಟಲು ಯತ್ನಿಸಿದ ಚೀನಾದ ಸುಮಾರು 300 ಯೋಧರನ್ನು ಭಾರತೀಯ ಸೈನಿಕರು ಹಿಮ್ಮೆಟ್ಟಿಸಿದ್ದಾರೆ. ಸಂಘರ್ಷದಲ್ಲಿ ಭಾರತದ ಆರು ಯೋಧರು ಗಾಯಗೊಂಡಿದ್ದಾರೆ.
ಈ ನಡುವೆ ಭಾರತ ಸೈನಿಕರು, ಚೀನಾ ಸೈನಿಕರನ್ನು ಹಿಮ್ಮೆಟ್ಟಿಸಿದ್ದಾರೆನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ ಈ ವಿಡಿಯೋ ಈ ವರ್ಷದಲ್ಲ, ಬದಲಾಗಿ ಕಳೆದ ವರ್ಷದ್ದು ಎನ್ನಲಾಗಿದೆ.

ಭಾರತ ಹಾಗೂ ಚೀನಾ ಸೈನಿಕರ ನಡುವಿನ ಸಂಘರ್ಷ ಕುರಿತಂತೆ ಕೇಂದ್ರ ಸರ್ಕಾರ ಸದನದಲ್ಲಿ ಸ್ಪಷ್ಟನೆ ನೀಡಿದ ಒಂದು ದಿನದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಅರುಣಾಚಲ ಪ್ರದೇಶದ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ಎಸಿ) ಬಳಿ ಭಾರತ-ಚೀನಾ ಸೈನಿಕರು ಪರಸ್ಪರ ಎದುರಾಗಿದ್ದು, ಭಾರತೀಯ ಸೈನಿಕರು ಲಾಠಿಗಳ ಮೂಲಕ ಚೀನಾ ಸೈನಿಕರನ್ನು ಹಿಮ್ಮೆಟ್ಟಿಸುತ್ತಿರುವುದನ್ನು ಕಾಣಬಹುದು. ಆದರೆ ಈ ವಿಡಿಯೋ ಡಿಸೆಂಬರ್ 09 ರಂದು ನಡೆದಿರುವ ಸಂಘರ್ಷದ ವಿಡಿಯೋ ಅಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.

ವಿಡಿಯೋದಲ್ಲಿ ಬರುವ ಧ್ವನಿಯಲ್ಲಿ ಭಾರತ ಸೈನಿಕನೊಬ್ಬ ಪಂಜಾಬಿ ಭಾಷೆಯಲ್ಲಿ ಮಾತನಾಡಿದ್ದು, “ಅವರನ್ನು ಜೋರಾಗಿ ಹೊಡಿರಿ, ಮತ್ತೆ ಅವರು ವಾಪಸ್ ಬರೋದಿಲ್ಲ” ಎಂದು ಹೇಳಿದ್ದಾರೆ. ಮತ್ತೋರ್ವ ಸೈನಿಕ ಹಿಂದಿಯಲ್ಲಿ, “ಅವರ ತಲೆ ಮೇಲೆ ಹೊಡೆಯಿರಿ, ಮಾರೋ ಮಾರೋ.. ಅವರು ವಾಪಸ್ ಬರಬಾರದು. ಅವರನ್ನು ಓಡಿಸಿ” ಎಂದು ಹೇಳಿದ್ದಾರೆ.
ಚೀನಾದ ಸೈನಿಕರನ್ನು ಭಾರತೀಯ ಸೈನಿಕರು ಲಾಠಿ, ದೊಣ್ಣೆಯಿಂದ ಹೊಡೆಯುವುದು, ಮುಷ್ಟಿಯನ್ನು ಬಳಸಿ ಹೊಡೆತ ನೀಡಿ ಚೀನಾ ಸೈನಿಕರನ್ನು ಹಿಮ್ಮೆಟ್ಟಿಸುವುದನ್ನು ಕಾಣಬಹುದು. ಭಾರತೀಯ ಸೈನಿಕರ ಹೊಡೆತಗಳನ್ನು ತಡಿಯಲಾಗದೆ ಚೀನಾ ಸೈನಿಕರು ಎದ್ನೋ ಬಿದ್ನೋ ಎಂದು ಅಲ್ಲಿಂದ ಕಾಲ್ಕಿತ್ತಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.
ಆದರೆ, ಸದ್ಯ ವೈರಲ್ ಆಗುತ್ತಿರೋ ವಿಡಿಯೋ ಡಿಸೆಂಬರ್ 09 ರಂದು ನಡೆದಿರುವ ಸಂಘರ್ಷದ ವಿಡಿಯೋ ಅಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ. ಲಡಾಖ್ನ ಗಲ್ವಾನ್ನಲ್ಲಿ ನಡೆದ ಸಂಘರ್ಷದ ಬಳಿಕ ಬಹುಶಃ ಈ ದಾಳಿ ನಡೆದಿರಬಹುದು ಎಂದು ತಿಳಿಸಿದೆ.
ಚೀನಾದ ಎಷ್ಟು ಸೈನಿಕರು ಗಾಯಗೊಂಡಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದರೆ ಚೀನಾದಲ್ಲಿ ಕೊರೋನಾ ಲಾಕ್ಡೌನ್ನಿಂದ ಜನರು ಅಲ್ಲಿನ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ.ಚೀನಾ ಜನರ ಗಮನವನ್ನು ಬೇರೆಡೆ ಸೆಳೆಯುವ ಕಾರಣಕ್ಕಾಗಿ ಸರ್ಕಾರ ಸೈನಿಕರ ಮೂಲಕ ಈ ಕೆಲಸ ಮಾಡಿಸಿರಬಹುದಎಂದು ಭಾರತದ ಮಾಜಿ ಸೇನಾ ಅಧಿಕಾರಿಗಳು ಅಭಿಪ್ರಾಯಟ್ಟಿದ್ದಾರೆ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ