Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಅಕ್ರಮ ಬೀಟೆ ಮರದ ನಾಟ ಸಾಗಾಟ : ಇಬ್ಬರ ಬಂಧನ

ಮಡಿಕೇರಿ: ಅಕ್ರಮವಾಗಿ ಬೀಟೆ ಮರದ ನಾಟ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊನ್ನಂಪೇಟೆ ಅರಣ್ಯ ವಲಯದ ತಂಡ ಯಶಸ್ವಿಯಾಗಿದೆ.
ಕುಂಜಿಲ ಗ್ರಾಮದ ಜುಬೇದ್ (೪೩), ವಿ. ಬಾಡಗ ಗ್ರಾಮದ ವೈ. ಸಿ. ಮಹೇಶ ಬಂಧಿತ ಆರೋಪಿಗಳು. ನೆಮ್ಮಲೆ ಗ್ರಾಮದ ಬ್ರಹ್ಮಗಿರಿ ಅರಣ್ಯ ವ್ಯಾಪ್ತಿಯ ಸಮೀಪ ಶನಿವಾರ ರಾತ್ರಿ ಮರದ ನಾಟ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ತಂಡ, ಇಬ್ಬರನ್ನು ವಶಕ್ಕೆ ಪಡೆದಿದೆ. ಪ್ರಕರಣದಲ್ಲಿ ಇನ್ನೂ ಕೆಲವರು ಪಾಲ್ಗೊಂಡಿದ್ದು, ಪರಾರಿಯಾಗಿದ್ದಾರೆ.
ಬಂಧಿತರಿಂದ ೩೫ ಮರದ ನಾಟಗಳು, ಅಶೋಕ ಲೈಲ್ಯಾಂಡ್ ಲಾರಿ, ಪಿಕ್ ಅಪ್ ವಾಹನ, ಒಂದು ದ್ವಿಚಕ್ರ ವಾಹನ ಸೇರಿ ಒಟ್ಟು ೨೬ ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿರಾಜಪೇಟೆ ಉಪಅರಣ್ಯ ಅಧಿಕಾರಿ ಶಿವರಾಂ ಬಾಬು ಮಾರ್ಗದರ್ಶನದಲ್ಲಿ ತಿತಿಮತಿ ಎಸಿಎಫ್ ಕೆ. ಎ ನೆಹರು ನೇತೃತ್ವದಲ್ಲಿ ಪೊನ್ನಂಪೇಟೆ ಆರ್‌ಎಫ್‌ಒ ಬಿ. ಎಂ. ಶಂಕರ್, ಡಿಆರ್‌ಎಫ್‌ಒ ಸಿ. ಡಿ. ಬೋಪಣ್ಣ, ಕೆ. ಜಿ. ದಿವಾಕರ್, ರಕ್ಷಿತ್, ಮಂಜುನಾಥ ಬೆನಕೊಟಗಿ, ಸಿಬ್ಬಂದಿ ಸಂಜಯ್ ಚಹ್ವಾನ್, ಕೆ. ಜಿ. ರಾಕೇಶ್, ಆಂಟೋನಿ ಪ್ರಕಾಶ್, ಆರ್‌ಆರ್‌ಟಿ ತಂಡ ಕಾಯಾಚರಣೆಯಲ್ಲಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ