Mysore
24
broken clouds

Social Media

ಶನಿವಾರ, 14 ಫೆಬ್ರವರಿ 2026
Light
Dark

ಅದೆಷ್ಟು ಒಡೆದು ಹಾಕ್ತಾರೆ ಒಡೆದು ಹಾಕಲಿ :ಸಿಂಹಗೆ ಸೇಠ್ ಸವಾಲು

ಮೈಸೂರು: ಗುಂಬಜ್ ಮಾದರಿಯ ಬಸ್ ನಿಲ್ದಾಣವನ್ನು ಒಡೆದು ಹಾಕೋದಾದರೆ, ಅದೆಷ್ಟು ಒಡೆದು ಹಾಕುತ್ತಾರೋ ಒಡೆದು ಹಾಕಲಿ ಎಂದು ಶಾಸಕ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್ ಸವಾಲು ಹಾಕಿದರು.

ಗುಂಬಜ್ ಮಾದರಿಯ ಬಸ್ ನಿಲ್ದಾಣ ಧ್ವಂಸ ಮಾಡುವೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ಯಾರ ಯಾರ ದೃಷ್ಟಿಯಲ್ಲಿ ಏನು ಕಾಣುತ್ತೊ ಅದೇ ಕಾಣುವುದು. ಗೋಪುರಗಳ ಮಸೀದಿ ಮಾದರಿಯಲ್ಲಿ ಇದೇ ಹೇಳುವಂತಹ ಪ್ರತಾಪ್ ಸಿಂಹ ಪ್ರಜ್ಞೆ ಯಾವ ರೀತಿ ಇದೇ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು ಎಂದು ತಿರುಗೇಟು ನೀಡಿದರು. ಇದು ಸರ್ಕಾರದ ಆಸ್ತಿ, ಏನೆಲ್ಲಾ ಒಡೆಯುತ್ತಾರೆ ಕಾದು ನೋಡಬೇಕು?

ಗೋಪುರದ ರೀತಿ ಕಾಣುವುದೆಲ್ಲಾ ಸಾಬ್ರುದು ಅನ್ನೊದಾದರೆ ನಾವು ಏನು ಮಾಡೊದು? ಆ ಶೆಲ್ಟರ್ ಯಾರು ವಿನ್ಯಾಸ ಮಾಡಿದ್ರು? ಎಂಬುದು ನನಗೆ ಗೊತ್ತಿಲ್ಲ. ಅದೆಷ್ಟು ಒಡೆದು ಹಾಕ್ತಾರೆ ಒಡೆದು ಹಾಕಲಿ ಎಂದರು. ಶಾಲೆಗಳಲ್ಲಿ ಕೇಸರಿ ಬಣ್ಣ ಹಾಕುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ವಿನಾಕಾರಣ ನಾವು ಸಷ್ಟಿ ಮಾಡುವುದಲ್ಲ. ಅದನ್ನ ರಕ್ಷಣೆ ಮಾಡಬೇಕೇ ಹೊರತು ಹಾಳು ಮಾಡಬಾರದು. ಅವರು ಏನು ಬೇಕಾದರೂ ಮಾಡಿಕೊಳ್ಳಲಿ ಎಂದರು. ಟಿಪ್ಪು ಜಯಂತಿ ನಾವು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದೇವೆ. ಆ ದಿನಾಂಕದಂದು ನಾವು ಮಾಡುತ್ತಾ ಬಂದಿದ್ದೇವೆ. ಟಿಪ್ಪು ಜಯಂತಿ ಒಂದು ದಿನ ಮಾಡುತ್ತೇವೆ. ಅವರು ಈ ರೀತಿ ಮಾಡುವುದರಿಂದ ವರ್ಷ ಪೂರ್ತಿ ಆಚರಣೆ ಮಾಡುತ್ತಾರೆ ಎಂದು ಅವರು ಹೇಳಿದರು.ಕೃತಿ ವಿರುದ್ಧ ಪಿಐಎಲ್ ಟಿಪ್ಪು ನಿಜ ಕನಸುಗಳು ನಾಟಕ ಕೃತಿ ನನ್ನ ಕೈ ಸೇರಿದೆ. ವಕೀಲ ರಂಗನಾಥ್ ಅವರ ಮೂಲಕ ಮೊಕದ್ದಮೆ ದಾಖಲಿಸುತ್ತೇನೆ. ಪಿಎಎಲ್ ಹಾಕುತ್ತೇವೆ. ಎಲ್ಲಿ? ಯಾವಾಗ ? ಎಂಬುದನ್ನು ವಕೀಲರು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!