Mysore
28
few clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಗುಂಡ್ಲುಪೇಟೆ: ಬಸ್‌ ನಿಲ್ದಾಣದಲ್ಲಿ ತಾಯಿ ಬಿಟ್ಟುಹೋಗಿದ್ದ ಮಗುವಿನ ಗುರುತು ಪತ್ತೆ

ಡಿಸೆಂಬರ್‌ 20ರಂದು ಗುಂಡ್ಲುಪೇಟೆಯ ಬಸ್‌ ನಿಲ್ದಾಣದಲ್ಲಿ ವೃದ್ಧೆಯೊಬ್ಬರ ಬಳಿ ಬಂದಿದ್ದ ಅಪರಿಚಿತ ಮಹಿಳೆ ತನ್ನ ಬಳಿ ಇದ್ದ ಹೆಣ್ಣು ಮಗುವನ್ನು ಕೊಟ್ಟು ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಕಣ್ಮರೆಯಾಗಿದ್ದರು. ಅತ್ತ ಮಗು ಪಡೆದ ವೃದ್ಧೆ ಮಹಿಳೆ ಬಾರದ್ದನ್ನು ಕಂಡು ಕಂಡಕ್ಟರ್‌ ಓರ್ವರಿಗೆ ಮಗುವನ್ನು ನೀಡಿದ್ದರು.

ಬಳಿಕ ಮಹಿಳೆ ಮಗು ಬಿಟ್ಟು ಹೋಗಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಸಹ ಆಗಿತ್ತು. ವಿಡಿಯೊ ಮೂಲಕ ಸಂಬಂಧಪಟ್ಟವರು ಬಂದು ಮಗುವನ್ನು ಪಡೆದುಕೊಳ್ಳಬೇಕು ಎಂದೂ ಸಹ ಹೇಳಲಾಗಿತ್ತು. ಪೊಲೀಸರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಮಕ್ಕಳ ಸಮಿತಿಯೊಂದಿಗೆ ಚರ್ಚಿಸಿದ ಬಳಿಕ ಮಗುವನ್ನು ಸ್ಥಳೀಯ ಸಿಎಂಎಸ್‌ ಅನಾಥಾಲಯದಲ್ಲಿ ಇರಿಸಲಾಗಿತ್ತು. ನಂತರ ಜಿಲ್ಲಾ ಮಕ್ಕಳ ಸಮಿತಿಯವರು ಮಗುವನ್ನು ಕೊಳ್ಳೇಗಾಲದ ಜೀವನ್‌ ಜ್ಯೋತಿ ಟ್ರಸ್ಟ್‌ಗೆ ಹಸ್ತಾಂತರಿಸಿದ್ದರು.

ವೈರಲ್‌ ಆದ ವಿಡಿಯೊ ಕಂಡ ಬಳಿಕ ಭಾನುವಾರ ಹಾಸನದಿಂದ ಕೊಳ್ಳೇಗಾಲಕ್ಕೆ ಬಂದ ಮಗುವಿನ ತಂದೆ ಮಗುವಿನ ದಾಖಲೆಗಳನ್ನು ಸಲ್ಲಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ