Mysore
23
overcast clouds

Social Media

ಗುರುವಾರ, 09 ಏಪ್ರಿಲ 2026
Light
Dark

ಸಿಹಿ ಕುಂಬಳಕಾಯಿ ದೋಚಿದ ಕಳ್ಳರು : ಠಾಣೆಯಲ್ಲಿ ದೂರು ದಾಖಲು

ಹೊಸೂರು : ಜಮೀನಿಗೆ ನುಗ್ಗಿದ ಕಳ್ಳರು 1 ಎಕರೆಯಲ್ಲಿ ಬೆಳೆದಿದ್ದ ಸಿಹಿಕುಂಬಳ ಕಾಯಿಗಳನ್ನು ಕದ್ದು ಹೊತ್ತೊಯ್ದಿದ್ದಾರೆ.
ಸಾಲಿಗ್ರಾಮ ತಾಲ್ಲೂಕಿನ ಚಿಕ್ಕಕೊಪ್ಪಲು ಗ್ರಾಮದ ರೈತ ಅಪ್ಪಾಜಿಗೌಡ ಅವರ ಜಮೀನಿಗೆ ನುಗ್ಗಿದ ಕಳ್ಳರು, ಬೆಳೆದಿದ್ದ ಸುಮಾರು 3ಟನ್‌ಗೂ ಅಧಿಕ ಪ್ರಮಾಣದ ಕುಂಬಳಕಾಯಿಗಳನ್ನು ದೋಚಿದ್ದಾರೆ. ಇದರಿಂದ 40 ಸಾವಿರ ರೂ.ಗಳಷ್ಟು ನಷ್ಟ ಸಂಭವಿಸಿದೆ.
ಬೆಳಿಗ್ಗೆ ಜಮೀನಿಗೆ ತೆರಳಿದ ಅಪ್ಪಾಜಿಗೌಡ ಅವರು ಕುಂಬಳಕಾಯಿ ಕಳ್ಳತನವಾಗಿರುವುದನ್ನು ಮನಗಂಡು, ಬೆಳೆ ಕೈಗೆ ಬರುವ ಸಮಯದಲ್ಲಿ ಈ ರೀತಿ ಕಳ್ಳರು ಕದ್ದರೆ ನಮ್ಮಂತಹ ಬಡ ರೈತರು ಬದುಕುವುದು ಹೇಗೆ ಎಂದು ಅಳಲು ತೋಡಿಕೊಂಡರು.
ಚುಂಚನಕಟ್ಟೆ ಉಪಠಾಣೆಯ ಸಿಬ್ಬಂದಿ ಪ್ರವೀಣ್, ಕೇಶವರಾಜೇಅರಸ್ ಸ್ಥಳ ಪರಿಶೀಲನೆ ಮಾಡಿ ದೂರು ದಾಖಲಿಸಿಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!