ಹನೂರು: ತಾಲ್ಲೂಕು ವ್ಯಾಪ್ತಿಯ ಟಿಬೆಟಿಯನ್ ಕಾಲೋನಿಗೆ ಭೇಟಿ ನೀಡಿದ್ದ ಹಿಮಾಚಲ ಪ್ರದೇಶದ ಸಂಸದ ದಾವೂಸ್ ಸಿಂಗ್ ರವರು ಶಾಸಕ ಆರ್.ನರೇಂದ್ರ ರವರನ್ನು ಸನ್ಮಾನಿಸಿದರು.
ಒಡೆಯರ್ ಪಾಳ್ಯದ ಟಿಬೆಟಿಯನ್ ಕಾಲೋನಿಯ ಚಟುವಟಿಕೆಗಳನ್ನು ಹಾಗೂ ಅಲ್ಲಿನ ಪರಿಸ್ಥಿತಿಯ ಬಗ್ಗೆ ಅಧ್ಯಯನಕ್ಕೆ ಬಂದಿದ್ದ ಹಿಮಾಚಲ ಪ್ರದೇಶದ ಸಂಸದರಾದ ದಾವೂಸ್ ಸಿಂಗ್ ಹಾಗೂ ಇಷಾಡೋಲಮ್ ರವರು ಹನೂರು ಶಾಸಕ ಆರ್ ನರೇಂದ್ರರವರ ಕೊಳ್ಳೇಗಾಲದ ನಿವಾಸಕ್ಕೆ ಭೇಟಿ ನೀಡಿ ಟಿಬೆಟಿಯನ್ನರಿಗೆ ಯಾವುದೇ ಮೂಲಭೂತ ಸೌಲಭ್ಯ ಕೊರತೆಯಾಗದಂತೆ ನೋಡಿ ಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಆರ್ ನರೇಂದ್ರ ಈಗಾಗಲೇ ಟಿಬೇಟಿಯನ್ ಕಾಲೊನಿಗೆ ಅವಶ್ಯಕತೆ ಇರುವ ರಸ್ತೆ ಚರಂಡಿ ಬೀದಿ ದೀಪ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ .ಕಳೆದ ವಾರ ಸರ್ಕಾರದಿಂದ 6 ಕೋಟಿ ಅನುದಾನ ಬಿಡುಗಡೆ ಮಾಡಿಸಿ ಟಿಬೆಟಿಯನ್ ಕಾಲೋನಿಯ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲು ಶ್ರಮಿಸುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಸಟಲ್ಮೆಂಟ್ ಅಧಿಕಾರಿ ಗಿಲಕ್,
ಮುಖಂಡ ಸವಘ್ ಸೋನಮ್, ಲೋಬಸ್ಗ್, ಷೇಧರ್ ಸೇರಿದಂತೆ ಇತರರು ಇದ್ದರು.





