Mysore
19
mist

Social Media

ಬುಧವಾರ, 24 ಡಿಸೆಂಬರ್ 2025
Light
Dark

ಎಚ್ ಡಿ ಕೆ ಮತ್ತು ಸಿ. ಪಿ. ಯೋಗೇಶ್ವರ್ ನಡುವೆ ‘ನಾನಾ’ ‘ನೀನಾ’ ಗುದ್ದಾಟ !

ಚನ್ನಪಟ್ಟಣ; ಗುದ್ದಾಟ ಗಮನಿಸಿದರೆ, ಸಿಪಿವೈ ವರ್ಚಸ್ಸು ಹೆಚ್ಚಳ ಆಗುವ ಸಾಧ್ಯತೆಗಳೇ ನಿಚ್ಚಳವಾಗಿ ಕಂಡು ಬರ್ತಿದೆ. 2023 ರ ಚುನಾವಣೆಗೆ ಈ ಗುದ್ದಾಟ ಎಚ್ಚರಿಕೆ ಗಂಟೆಯಾಗಿ ಪರಿಣಮಿಸಿದೆ. ಸಿಪಿವೈಗೆ ಪಕ್ಷದಲ್ಲಿ ಮತ್ತಷ್ಟು ಗುರುತಿಸಿಕೊಳ್ಳಲು ಅವಕಾಶ ಸಿಗಬಹುದು. ಜೊತೆಗೆ ಈ ಪ್ರಕರಣ ರಾಷ್ಟ್ರಿಯ ಬಿಜೆಪಿ ನಾಯಕರ ಗಮನ ಸೆಳೆದಿರುವ ಹಿನ್ನೆಲೆಯಲ್ಲಿ, ಇದೇ ಘಟನೆ ಆಧರಿಸಿ ಸಿಪಿವೈಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆತರೂ ಇಲ್ಲ ಅಚ್ಚರಿ ಎಂದೇ ವಿಶ್ಲೇಷಿಸಲಾಗುತ್ತಿದೆ. ಬಿಜೆಪಿ ತಂಡ ಸಿಪಿವೈ ಬೆಂಬಲಕ್ಕೆ‌ ನಿಲ್ಲುವ ಸಾಧ್ಯತೆಗಳು ಗೋಚರಿಸುತ್ತಿವೆ

ಚನ್ನಪಟ್ಟಣದಲ್ಲಿ ನಡೆದ ಅಭಿವೃದ್ಧಿ ಗಲಾಟೆ ವಿಚಾರ 2023 ರ ಚುನಾವಣೆ ಗುದ್ದಾಟಕ್ಕೆ ಮುನ್ನುಡಿ ಬರೆದಿದೆ! ಶನಿವಾರ ನಡೆದ ಗಲಾಟೆಯನ್ನು ಗಮನಿಸಿದರೆ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ಹೇಗಿರಲಿದೆ ಎಂಬುದರ ಮುನ್ಸೂಚನೆಯಾಗಿದೆ. ಈ ಗುದ್ದಾಟವು ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ. ಪಿ. ಯೋಗೇಶ್ವರ್ ನಡುವೆ ‘ನಾನಾ’ ‘ನೀನಾ’ ಕಾದಾಟದ ಆರಂಭ ಎಂದೇ ವಿಶ್ಲೇಷಿಸಲಾಗುತ್ತಿದೆ.

ಯಾರಿಗೆ ಪ್ಲಸ್? ಯಾರಿಗೆ ಮೈನಸ್ ?
ಈ ಗುದ್ದಾಟದ ತೀವ್ರತೆ ಗಮನಿಸಿದರೆ, ಸಿ. ಪಿ. ಯೋಗೇಶ್ವರ್ ವರ್ಚಸ್ಸು ಹೆಚ್ಚಳ ಆಗುವ ಸಾಧ್ಯತೆಗಳೇ ನಿಚ್ಚಳವಾಗಿ ಕಂಡು ಬರ್ತಿದೆ. 2023 ರ ಚುನಾವಣೆಗೆ ಈ ಗುದ್ದಾಟ ಎಚ್ಚರಿಕೆ ಗಂಟೆಯಾಗಿ ಪರಿಣಮಿಸಿದೆ. ಸಿಪಿವೈಗೆ ಪಕ್ಷದಲ್ಲಿ ಮತ್ತಷ್ಟು ಗುರುತಿಸಿಕೊಳ್ಳಲು ಅವಕಾಶ ಸಿಗಬಹುದು. ಜೊತೆಗೆ ಈ ಪ್ರಕರಣ ರಾಷ್ಟ್ರಿಯ ಬಿಜೆಪಿ ನಾಯಕರ ಗಮನ ಸೆಳೆದಿರುವ ಹಿನ್ನೆಲೆಯಲ್ಲಿ, ಇದೇ ಘಟನೆ ಆಧರಿಸಿ ಸಿಪಿವೈಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆತರೂ ಇಲ್ಲ ಅಚ್ಚರಿ ಎಂದೇ ವಿಶ್ಲೇಷಿಸಲಾಗುತ್ತಿದೆ. ಈಗಾಗಲೇ ಇಡೀ ಬಿಜೆಪಿ ತಂಡ ಸಿಪಿವೈ ಬೆಂಬಲಕ್ಕೆ‌ ನಿಲ್ಲುವ ಸಾಧ್ಯತೆಗಳು ಗೋಚರಿಸುತ್ತಿವೆ. ಜೊತೆಯಲ್ಲೇ ಒಂದಷ್ಟು ಋಣಾತ್ಮಕ ಪರಿಣಾಮಗಳನ್ನೂ ಸಿ. ಪಿ. ಯೋಗೇಶ್ವರ್ ಎದುರಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಚುನಾವಣೆ ಸಮಯದಲ್ಲಿ ತಮ್ಮದೇ ಪಕ್ಷದ ನಾಯಕರಿಂದ ಸಿಪಿವೈ ಚೀಮಾರಿಗೆ ಒಳಗಾಗುವ ಸಾಧ್ಯತೆಯೂ ಇಲ್ಲದಿಲ್ಲ. ಎಲ್ಲಕ್ಕಿಂತಾ ಹೆಚ್ಚಾಗಿ ಸಚಿವ ಸಂಪುಟದ ವಿಸ್ತರಣೆ ಸಮಯದಲ್ಲಿ ಸಿಪಿವೈ ವಿರೋಧಿಗಳು ಇದೇ ಗಲಾಟೆಯನ್ನು ಅಸ್ತ್ರ ಮಾಡಿಕೊಂಡು ಸಿಪಿವೈಗೆ ಸ್ಥಾನ ತಪ್ಪಿಸಲು ಯತ್ನಿಸುವ ಸಾಧ್ಯತೆಗಳೂ ಇಲ್ಲದಿಲ್ಲ. ಹೀಗಾಗಿ, ಶನಿವಾರ ನಡೆದ ಹೈಡ್ರಾಮಾ, ಸಿಪಿವೈಗೆ ವರವೂ ಆಗಬಹುದು, ಶಾಪವೂ ಆಗಬಹುದು..!

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!