Mysore
29
overcast clouds

Social Media

ಶುಕ್ರವಾರ, 06 ಮಾರ್ಚ್ 2026
Light
Dark

ಹಾಸನಾಂಬ ದೇವಿ ದರ್ಶನ ಪಡೆದ ಸಾಹಿತಿ ಎಸ್‌.ಎಲ್‌.ಭೈರಪ್ಪ

ಹಾಸನ: ವರ್ಷಕ್ಕೆ ಒಮ್ಮೆ ಬಾಗಿಲು ತೆರೆದು ದರ್ಶನ ನೀಡುವ ಹಾಸನಾಂಬ   ದೇವಿ ದರ್ಶನಕ್ಕೆ ರಾಜ್ಯದ ನಾನಾ ಭಾಗದಿಂದ ಭಕ್ತರು, ಗಣ್ಯರು ಆಗಮಿಸುತ್ತಿದ್ದು, ಎಂಟನೇ ದಿನವಾದ ಶುಕ್ರವಾರವೂ ಭಕ್ತರ ಸಂಖ್ಯೆ ಹೆಚ್ಚಿತ್ತು. ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಸೇರಿದಂತೆ ಹಲವು ಗಣ್ಯರು ದೇವಿ ದರ್ಶನ ಪಡೆದರು.

ಕಳೆದ ಮೂರು ದಿನದಿಂದ ನಿತ್ಯ 30ರಿಂದ 40 ಸಾವಿರ ಭಕ್ತರು ದೇವಿ ದರ್ಶನಕ್ಕೆ ಬರುತ್ತಿದ್ದು, ರಾಜಕಾರಣಿಗಳು, ಗಣ್ಯರು, ನ್ಯಾಯಾಧೀಶರು, ಮಠಾಧೀಶರು ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ. ಹಿರಿಯ ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ, ಶಿವಗಂಗೆ ಬೆಟ್ಟದ ಮಲಯಮುನಿ ಶಾಂತವೀರ ಸ್ವಾಮೀಜಿ, ಬಸವ ಕಲ್ಯಾಣ ಮಠದ ಸದಾಶಿವ ಸ್ವಾಮೀಜಿ, ಮೈಸೂರು ಮಹಾನಗರ ಪಾಲಿಕೆ ಮಾಜಿ ಮೇಯರ್‌ ಸುನಂದಾ ಪಾಲನೇತ್ರ ಮತ್ತಿತರರು ಆಗಮಿಸಿ ದರ್ಶನ ಪಡೆದರು.

ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡ ದೇವಾಲಯಕ್ಕೆ ಆಗಮಿಸಿ ಸುಗಮ ದರ್ಶನಕ್ಕೆ ವ್ಯವಸ್ಥೆ ಮಾಡಿದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!