ಹಾಸನ : ರಾಜ್ಯದಲ್ಲಿ ಡೆಂಗ್ಯೂ ಜ್ವರದ ಹಾವಳಿ ಹೆಚ್ಚಾಗುತ್ತಿದ್ದು, ಹಾಸನದಲ್ಲಿ ಇದುವರೆಗೂ ಡೆಂಗ್ಯೂ ಜ್ವರಕ್ಕೆ ಅತಿ ಹೆಚ್ಚು ಮಕ್ಕಳೇ ಸಾವಿಗೀಡಾಗುತ್ತಿರುವುದು ಆತಂಕ ಉಂಟು ಮಾಡುತ್ತಿದೆ. ಹಾಸನದಲ್ಲಿಯೂ ಕೂಡ ಮತ್ತೋರ್ವ ಯುವತಿ ಡೆಂಗ್ಯೂಯಿಂದ ಸಾವನ್ನಪ್ಪಿದ್ದಾಳೆ.
ಅರಸೀಕೆರೆ ತಾಲೂಕಿನ ಮುದುಡಿ ತಾಂಡಾದ ೨೩ ವರ್ಷದ ಯುವತಿ ಸುಪ್ರೀತಾ ಶಂಕಿತ ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದಾಳೆ. ನಾಲ್ಕು ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಳು. ಈ ವೇಳೆ ಬಹುಅಂಗಾಂಗ ವೈಫಲ್ಯಗೊಂಡಿದ್ದರಿಂದ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಈವರೆಗೆ ಜಿಲ್ಲೆಯಲ್ಲಿ ೩ ಮಕ್ಕಳು ಸೇರಿ ೭ ಮಂದಿ ಡೆಂಗ್ಯೂ ಗೆ ಬಲಿಯಾಗಿದ್ದಾರೆ.





