Mysore
23
haze

Social Media

ಗುರುವಾರ, 11 ಡಿಸೆಂಬರ್ 2025
Light
Dark

ಭೀಮನಿಗೆ ಚಿಕಿತ್ಸೆ ಸ್ಥಗಿತ : ನೋವಿನಿಂದ ನರಳಾಟ

ಹಾಸನ : ಕಾಳಗದಲ್ಲಿ ತೀವ್ರವಾಗಿ ಗಾಯಗೊಂಡಿರುವ 40 ವರ್ಷದ ಭೀಮಾ ಆನೆಗೆ ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಅಧಿಕಾರಿಗಳು ಇನ್ನೂ ಮುಂದಾಗಿಲ್ಲ. ಶಾರ್ಪ್ ಶೂಟರ್ ವೆಂಕಟೇಶ್ ಸಾವಿನ ಬಳಿಕ ಚಿಕಿತ್ಸೆಯನ್ನು ಸ್ಥಗಿತಗೊಳಿಸಲಾಗಿದೆ.

ತೀವ್ರ ನೋವಿನಿಂದ ನಡೆಯಲು ಸಾಧ್ಯವಾಗದೆ, ಆಲೂರಿನ ಕಾಫಿ ಎಸ್ಟೇಟ್‌ನಲ್ಲಿ ಒಂದೆರಡು ದಿನಗಳಿಂದ ಒಂದೇ ಸ್ಥಳದಲ್ಲಿ ಆನೆ ನಿಂತಿರುವುದು ಕಂಡುಬಂದಿದೆ.

ಭೀಮ ಆನೆಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುವ ವೇಳೆ, ಶಾರ್ಪ್ ಶೂಟರ್ ವೆಂಕಟೇಶ್ ಸಾವಿಗೀಡಾಗಿದ್ದರು. ಆಗಸ್ಟ್ 31ರಂದು ಘಟನೆ ನಡೆದಿದ್ದು, ಅಂದಿನಿಂದ ಗಾಯಗೊಂಡ ಆನೆ ಚಿಕಿತ್ಸೆಗಾಗಿ ಕಾಯುತ್ತಲೇ ಇದೆ.

ಈಮಧ್ಯೆ, ಘಟನೆ ನಂತರ ಅರಣ್ಯ ಇಲಾಖೆಯು ಆನೆಗೆ ಚಿಕಿತ್ಸೆ ನೀಡುವ ಕಾರ್ಯಾಚರಣೆಯನ್ನು ನಿಲ್ಲಿಸಿದೆ ಎನ್ನಲಾಗಿದೆ. ಇದೀಗ ಸ್ಥಳೀಯರು ಗಾಯಗೊಂಡಿರುವ ಆನೆಗೆ ಚಿಕಿತ್ಸೆ ನೀಡುವಂತೆ ಇಲಾಖೆಯನ್ನು ಒತ್ತಾಯಿಸುತ್ತಿದ್ದು, ಅದರ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಡಿಸಿಎಫ್ ಮೋಹನ್ ಕುಮಾರ್ ಪ್ರಕಾರ, ಆನೆಗೆ ಚಿಕಿತ್ಸೆ ನೀಡಲು ಇಲಾಖೆ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಯೋಜಿಸಿದೆ ಎಂದಿದ್ದಾರೆ.

ಆಲೂರು ತಾಲೂಕಿನ ಮಗ್ಗೆ ರಾಯರಕೊಪ್ಪಲು ಹಾಗೂ ಸಕಲೇಶಪುರದ ಹೆತ್ತೂರು ಭಾಗಗಳಲ್ಲಿ ಆನೆಗಳು ನಿರಂತರವಾಗಿ ಬೆಳೆದು ನಿಂತಿರುವ ಬೆಳೆಗಳನ್ನು ನಾಶಪಡಿಸುತ್ತಿರುವುದರಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!