ಹಾಸನ: ಜಿಲ್ಲೆಯ ಅಕಲಗೂಡು ತಾಲ್ಲೂಕಿನ ಕೇರಳಾಪುರ ಗ್ರಾಮದಲ್ಲಿಂದು ಚೋಳರ ಕಾಲದ ಐತಿಹಾಸಿಕ ಪ್ರಸಿದ್ಧ ವೀರಭದೇಶ್ವರ ಸ್ವಾಮಿಯ ರಥೋತ್ಸವ ಅದ್ದೂರಿಯಾಗಿ ಜರುಗಿದೆ.
ಕೇರಳಾಪುರದ ವೀರಭದ್ರೇಶ್ವರ ದೇವಾಲಯದಲ್ಲಿ ಇಂದು(ಮಾರ್ಚ್.9) ಬೆಳಿಗ್ಗೆ ಗಣಪತಿ ಪೂಜೆ, ಅಂಕುರಾರ್ಪಣೆ, ನವಮಿ ಉತ್ಸವ ಹಾಗೂ ನವಗ್ರಹ ಪೂಜೆ ಸಲ್ಲಿಸಲಾಯಿತು. ಅಲ್ಲದೇ ಯಾತ್ರಾದಾನೋತ್ಸವ ಸೇವೆ ನೆರವೇರಿಸಲಾಗಿದೆ.
ವೀರಭದ್ರೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಹೊರಗೆ ತಂದು ಪ್ರದಕ್ಷಿಣೆ ಹಾಕಿದ ಬಳಿಕ ದೇವಸ್ಥಾನ ಎದುರಿದ್ದ ಅಲಂಕೃತ ರಥದ ಮೇಲೆ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗಿದೆ. ಬಳಿಕ ಭಕ್ತರು ಸಂತಸದಿಂದ ತೇರು ಎಳೆದರು. ನಂತರ ರಥ ಬೀದಿಯಲ್ಲಿ ತೇರು ಮುಂದೆ ಚಲಿಸುತ್ತಿರುವಾಗ ಭಕ್ತರು ಹಣ್ಣು ಮತ್ತು ಧವನವನ್ನು ಎಸೆದು ಸಂತಸ ಪಟ್ಟಿದ್ದಾರೆ.





