ಹಾಸನ: ಆನ್ ಲೈನ್ ಜೂಜಾಟದಲ್ಲಿ ಹಣ ಕಳೆದುಕೊಂಡು ಜಿಲ್ಲೆಯ ವಿವಿಧೆಡೆ ನಡೆದಿದ್ದ ಏಳು ಪ್ರತ್ಯೇಕ ಕಳವು ಪ್ರಕರಣದಲ್ಲಿ 6.50 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕದ್ದಿದ್ದ ಆರೋಪಿಯನ್ನು ಡಿವೈಎಸ್ ಪಿ ನೇತೃತ್ವದ ವಿಶೇಷ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಪ್ರಕರಣ ಗಂಭೀರವಾಗಿ ಪರಿಗಣಿಸಿ ಎಎಸ್ ಪಿ ತಮ್ಮಯ್ಯ ಹಾಗೂ ಡಿವೈಎಸ್ ಪಿ ಉದಯಭಾಸ್ಕರ್, ಸಿಪಿಐ ಸುರೇಶ್ ಎಸ್ ಐ ಅಜಯ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಅ.2 ರಂದು ಖಚಿತ ಮಾಹಿತಿ ಆರೋಪಿ ಬಂಧಿಸಿ ಹೊಳೆನರಸೀಪುರ, ಅರಕಲಗೂಡು, ಕೊಣನೂರು,ದು ದ್ದ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಏಳು ಸರಕಳವು ಪ್ರಕರಣದಲ್ಲಿ ಕಳವು ಮಾಡಿದ್ದ 135 ಗ್ರಾಂ ತೂಕದ 6.50 ಲಕ್ಷ ಬೆಲೆಯ ಚಿನ್ನದ ಸರಗಳನ್ಮು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು. ಆರೋಪಿಗಳ ಪತ್ತೆ ಹಚ್ಚಿದ ತಂಡಕ್ಕೆ ಐದು ಸಾವಿರ ರೂ.ಬಹುಮಾನ ಘೋಷಿಸಿದರು.