ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಗೊಂದಲ ಹೊಸ ತಿರುವು ಪಡೆದುಕೊಂಡಿದೆ. ಸ್ವರೂಪ್ ಹಾಗೂ ಭವಾನಿ ರೇವಣ್ಣ ಹೆಸರಿನ ನಡುವೆ ಮತ್ತೊಂದು ಹೆಸರು ತೇಲಿಬಂದಿದೆ. ಸಾಮಾನ್ಯ ಕಾರ್ಯಕರ್ತ ಹೆಸರಿನಲ್ಲಿ ಅಂತಿಮವಾಗಿ ಸ್ವರೂಪ್ಗೆ ಟಿಕೆಟ್ ನೀಡಿದರೆ ಭವಾನಿ ಬೆಂಬಲಿಗರು ಸಿಡಿದೇಳು ಭೀತಿ ಇದೆ. ಇನ್ನು ಭವಾನಿಗೆ ಟಿಕೆಟ್ ನೀಡಿದರೆ ಸ್ವರೂಪ್ ಬೆಂಬಲಿಗರು ಅಸಮಾಧಾನಗೊಳ್ಳುವ ಸಾಧ್ಯತೆಗಳು ಇವೆ. ಈ ಹಿನ್ನೆಲೆಯಲ್ಲಿ ಈ ಇಬ್ಬರನ್ನು ಹೊರತುಪಡಿಸಿ ಹೊಸ ಮುಖಕ್ಕೆ ಮಣೆ ಹಾಕಲು ಜೆಡಿಎಸ್ ವರಿಷ್ಠರು ತಂತ್ರ ರೂಪಿಸಿದ್ದಾರೆ.
ಜೆಡಿಎಸ್ನ ಹಿರಿಯ ನಾಯಕ, ಹಾಸನ ನಗರಾಭಿವೃದ್ಧಿ ಪ್ರಾದಿಕಾರದ ಮಾಜಿ ಅದ್ಯಕ್ಷ ಕೆ.ಎಂ.ರಾಜೇಗೌಡ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಆ ಹೆಸರು ಕ್ಷೇತ್ರದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಹಾಸನ ಜಿಲ್ಲಾ ರಾಜಕಾರಣದಲ್ಲಿ ಸಂಚನ ಮೂಡಿಸಿದೆ. ತಮ್ಮನ್ನ ಕಡೆಗಣಿಸಿ ಸ್ಚರೂಪ್ ಟಿಕೆಟ್ ಪಡೆದರೆ ತಮ್ಮ ನಾಯಕತ್ವ ಜಿಲ್ಲೆಯಲ್ಲಿ ಕುಗ್ಗಿದಂತಾಗುತ್ತದೆ ಎಂದು ಅರಿತ ರೇವಣ್ಣ, ತಮ್ಮ ಆಪ್ತ, ಹಾಗೂ ಮಖ್ಯವಾಗಿ ದೇವೇಗೌಡರ ಜೊತೆಗೂ ಒಡನಾಟ ಇರುವ ರಾಜೇಗೌಡರ ಹೆಸರು ಪ್ರಸ್ತಾಪಿಸಿದ್ದಾರೆ.