ಬೆಂಗಳೂರು: ಜೆಡಿಎಸ್ ರೈತರಿಂದ ಬೆಳೆದ ಪಕ್ಷ, ನಾಶ ಮಾಡಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಮಾತನಾಡಿದ ಅವರು, ಭ್ರಷ್ಟ ಸರ್ಕಾರ ತೆಗೆಯಲು ಸಮಾವೇಶ ಮಾಡುತ್ತಿದ್ದೇವೆ. ಜೆಡಿಎಸ್ ಪಕ್ಷ ಸ್ಥಾಪನೆ ಮಾಡಿ 25 ವರ್ಷ ಆಗಿದೆ. ದೇವೇಗೌಡರ ಜನ್ಮಭೂಮಿಯಲ್ಲೇ ಬೆಳ್ಳಿಹಬ್ಬ ಮಾಡುತ್ತಿದ್ದೇವೆ ಎಂದು ಹೇಳಿದರು.
ಜೆಡಿಎಸ್ ಪಕ್ಷವನ್ನು ಸದೃಢ ಮಾಡಲು ಸಮಾವೇಶ ಮಾಡುತ್ತಿದ್ದೇವೆ. ಜೆಡಿಎಸ್ ಪಕ್ಷ ನಾಶವಾಗಲಿ ಎಂದು ವಿಪಕ್ಷಗಳು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇದು ರೈತರಿಂದ ಬೆಳೆದ ಪಕ್ಷ. ನಾಶ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದರು.





