Mysore
25
haze

Social Media

ಗುರುವಾರ, 29 ಜನವರಿ 2026
Light
Dark

ಅಪಘಾತದಲ್ಲಿ ಐಪಿಎಸ್‌ ಅಧಿಕಾರಿ ಸಾವು: ವೃತ್ತಿ ಜೀವನದ ಮೊದಲ ದಿನವೇ ದುರಂತ!

ಹಾಸನ: ಚಾಲಕನ ನಿಯಂತ್ರಣ ತಪ್ಪಿ ಜೀಪ್‌ ರಸ್ತೆ ಬದಿಗೆ ಉರುಳಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಪ್ರೊಬೆಷನರಿ ಐಪಿಎಸ್‌ ಅಧಿಕಾರಿ ಚಿಕಿತ್ಸೆ ಫಲಕಾರಿಯಾಗದೆ ವೃತ್ತಿ ಜೀವನಕ್ಕೆ ಹಾಜರಾಗುವೆ ಮುನ್ನವೇ ಇಹಲೋಕ ತ್ಯಜಿಸಿದ ದಾರುಣ ಘಟನೆ ಭಾನುವಾರ ತಾಲೂಕಿನ ಕಿತ್ತಾನೆಗಡಿ ಬಳಿ ಸಂಭವಿಸಿದೆ.

ಹರ್ಷಭರ್ಧನ್‌ ಮೃತ ಐಪಿಎಸ್‌ ಅಧಿಕಾರಿ. ಪ್ರೊಬೆಷನರಿ ಐಪಿಎಸ್‌ ಅಧಿಕಾರಿಯಾಗಿ ಸೋಮವಾರ ಹಾಸನದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಮೈಸೂರಿನ ದಕ್ಷಿಣ ವಲಯ ಐಜಿ ಅವರ ಬಳಿ ವರದಿ ಮಾಡಿಕೊಂಡು ಹಾಸನಕ್ಕೆ ಜೀಪ್ ನಲ್ಲಿ ಬರುವಾಗ ಕಿತ್ತಾನೆ ಬಳಿ ಸಂಜೆ 4.30 ರ ವೇಳೆಗೆ ಜೀಪ್ ನ ಟೈರ್ ಸ್ಫೋಟವಾದ ಕಾರಣ ಜೀಪ್ ಮೂರು ಸುತ್ತು ಉರುಳಿ ಅದರಲ್ಲಿ ಪ್ರಯಾಣಿಸುತ್ತಿದ್ದ ಹರ್ಷಬರ್ಧನ್ ತಲೆಗೆ ಹಾಗೂ ದೇಹದ ಇನ್ನಿತರ ಭಾಗಕ್ಕೆ ತೀವ್ರವಾಗಿ ಪೆಟ್ಟುಬಿದ್ದಿತ್ತು.

ಜೀಪ್ ಚಾಲಕ ಮಂಜೇಗೌಡರಿಗೂ ಗಾಯಗಳಾಗಿದ್ದು, ಇಬ್ಬರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ನಿರಂತರ ಚಿಕಿತ್ಸೆ ನೀಡಿದರೂ. ಆದರೂ ಚಿಕಿತ್ಸೆ ಫಲಿಸದೆ ಯುವ ಐಪಿಎಸ್‌ ಅಧಿಕಾರಿ ಹರ್ಷಬರ್ಧನ್ ತನ್ನ ವೃತ್ತಿ ಜೀವನಕ್ಕೆ ಹಾಜರಾಗುವ ಮುನ್ನ ಇಹಲೋಕ ತ್ಯಜಿಸಿದ್ದಾರೆ.

ಮೂಲತಃ ಬಿಹಾರದ ಹರ್ಷವರ್ಧನ್‌ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ವಾಸವಾಗಿದ್ದರು. ಮಧ್ಯಪ್ರದೇಶದ ಐಇಟಿಯಲ್ಲಿ ಡಿಎವಿಇ ಇಂಜಿನಿಯರಿಂಗ್‌ ಪದವಿ ಪಡೆದು 2022-23ರ ಐಪಿಎಸ್‌ ಬ್ಯಾಚ್‌ನಲ್ಲಿ ತೇರ್ಗಡೆ ಹೊಂದಿದ್ದ ಇವರು ಕರ್ನಾಟಕ ಕೇಡರ್‌ನಲ್ಲಿ ರಾಜ್ಯಕ್ಕೆ ಆಯ್ಕೆಯಾಗಿದ್ದರು. ಮೃತರ ತಂದೆ ಕೂಡ ಐಎಎಸ್‌ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಘಟನೆ ಬಗ್ಗೆ ಎಡಿಜಿಪಿ ಅಲೋಕ್‌ ಕುಮಾರ್‌ ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ.

Tags:
error: Content is protected !!