ಹಾಸನ: ಪತಿ ಎರಡನೇ ಮದುವೆಯಾಗಿದ್ದನ್ನು ಪ್ರಶ್ನಿಸಿದ್ದಕ್ಕೆ ಮೊದಲ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಲೂರು ತಾಲ್ಲೂಕಿನ ಯಡೂರು ಗ್ರಾಮದಲ್ಲಿ ನಡೆದಿದೆ.
ರಾಧಾ ಎಂಬುವವರೇ ಹತ್ಯೆಯಾಗಿರುವ ದುರ್ದೈವಿಯಾಗಿದ್ದಾರೆ. ಪತಿ ಕುಮಾರ ಎಂಬುವವನೇ ಹತ್ಯೆ ಮಾಡಿದ ಪತಿಯಾಗಿದ್ದಾನೆ.
ಕಳೆದ ನಾಲ್ಕು ವರ್ಷಗಳಿಂದ ರಾಧಾ ಪತಿಯಿಂದ ದೂರವಿದ್ದು ಬೇರೆ ಮನೆಯಲ್ಲಿ ವಾಸವಾಗಿದ್ದರು. ಹೀಗಿರುವಾಗಲೇ ಪತಿ ಕುಮಾರ ಎರಡನೇ ಮದುವೆಯಾಗಿರುವ ವಿಚಾರ ರಾಧಾಗೆ ತಿಳಿದಿತ್ತು.
ಜನವರಿ.10ರ ರಾತ್ರಿ ಯಡೂರಿಗೆ ರಾಧಾ ಬಂದಿದ್ದರು. ಅದೇ ದಿನ ರಾತ್ರಿ ರಾಧಾರನ್ನು ಕುಮಾರ ಮನೆಯಲ್ಲಿಯೇ ಹತ್ಯೆ ಮಾಡಿ ಯಗಚಿ ನದಿಗೆ ಬಿಸಾಡಿದ್ದ. ಬಳಿಕ ಪೊಲೀಸರಿಗೆ ತಾನೇ ಮಾಹಿತಿ ನೀಡಿದ್ದ. ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





