ಹಾಸನ: ನಾನು ಜೆಡಿಎಸ್ ಬಿಟ್ಟು ಹೋದರೆ ದ್ರೋಹ ಹೇಗಾಗುತ್ತದೆ? ನಾನು ಅಲ್ಲಿದ್ದರೆ ಇನ್ನೊಂದು ಸೀಟ್ ಜಾಸ್ತಿ ಆಗೋದು ಅಷ್ಟೇ. ಏನು ದ್ರೋಹ ಮಾಡಿದ್ದೀನಿ ಎಂದು ಜೆಡಿಎಸ್ ನಾಯಕರಿಗೆ ಶಾಸಕ ಶಿವಲಿಂಗೇಗೌಡ ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಅರಸೀಕೆರೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ನನ್ನದೇ ಆದ ವ್ಯಕ್ತಿತ್ವ ಇದೆ. ನಾನು ಬೆಳೆದಿದ್ದೀನಿ. ರಾಜಕೀಯ ಏನು ಅಂಥ ನನಗೆ ಚೆನ್ನಾಗಿ ಗೊತ್ತಿದೆ. ನೀವು ಯಡಿಯೂರಪ್ಪರಿಗೆ ಸಿಎಂ ಸ್ಥಾನ ಕೊಡ್ತೀನಿ ಅಂತಾ ಹೇಳಿ ಅಧಿಕಾರ ಕೊಟ್ರಾ? ಅವರಿಗೆ ಮೋಸ ಮಾಡಿದಂತೆ ಆಗಲಿಲ್ವಾ? ಎಂದು ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಬಂದು ಅರಸೀಕೆರೆಯಲ್ಲಿ ಜೆಡಿಎಸ್ ಸಂಘಟನೆ ಮಾಡಿದ್ದೆ. ಎಷ್ಟು ಜನ ಪಾರ್ಟಿ ಬಿಟ್ಟು ಹೋಗುತ್ತಿದ್ದಾರೆ. ಇವರು ಬಿಜೆಪಿ ಜೊತೆ ಹೆಂಗೆ ಹೋದ್ರು? ನೀವು ಹೆಂಗೆ ಅಧಿಕಾರ ಹುಡುಕಿಕೊಂಡು ಹೋಗ್ತಿರೋ ನಾನು ಹಾಗೆ. ನಾವೇನು ಸನ್ಯಾಸಿಗಳಲ್ಲ. ನಮಗೂ ಆಸೆ ಎಂದು ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.




